ಕಾಸರಗೋಡು, ಮಾ 27 (DaijiworldNews/HR): ಕರಂದ ಕ್ಕಾಡ್ ಅಶ್ವಿನಿ ನಗರದ ಖಾಸಗಿ ಆಸ್ಪತ್ರೆ ಪರಿಸರದ ಬಾವಿಯಲ್ಲಿ ಪುರುಷರೋರ್ವರ ಮೃತದೇಹ ಇಂದು ಮಧ್ಯಾಹ್ನ ಪತ್ತೆಯಾಗಿದೆ.
ದುರ್ವಾಸನೆ ಕಂಡು ಬಂದ ಹಿನ್ನಲೆಯಲ್ಲಿ ಪರಿಸರ ವಾಸಿಗಳು ಗಮನಿಸಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಇನ್ನು ಕಾಸರಗೋಡು ಪೊಲೀಸರು ಸ್ಥಳ ಕ್ಕಾಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿದರು. ಮಹಜರು ನಡೆಸಿ ಕಾಸರಗೋಡು ಜನರಲ್ ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ.