ಉಡುಪಿ, ಮಾ 26 (DaijiworldNews/HR): ರಾಹುಲ್ ಗಾಂಧಿ ಅವರನ್ನು ಸಂಸತ್ತಿನಿಂದ ಅನರ್ಹ ಮಾಡಿರುವುದು ಸರ್ವಾಧಿಕಾರದ ಪರಮಾವಧಿ. ಸಾವಿರಾರು ಎಂದು ಮಾಜಿ ಸಚಿವ ಹಾಗೂ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಕಿಡಿ ಕಾರಿದ್ದಾರೆ.
img src=https://daijiworld.ap-south-1.linodeobjects.com/Linode/img_tv247/hr-260323-sorake.jpg>
ಉಡುಪಿಯಲ್ಲಿ ಮಾತನಾಡಿದ ಅವರು ಕೋಟಿ ರೂಪಾಯಿ ವಂಚನೆ ಮಾಡಿ ವಿದೇಶದಲ್ಲಿ ಕುಳಿತವರ ಬಗ್ಗೆ ಸ್ವರ ಎತ್ತಬಾರದು ಟೀಕಿಸಬಾರದೇ ? ಅದಾನಿಯಂತ ವ್ಯಕ್ತಿಯ ಬಗ್ಗೆ ಪಾರ್ಲಿಮೆಂಟ್ ನಲ್ಲಿ ಮಾತನಾಡಬಾರದೆಂದಾದರೆ ಇದು ಪ್ರಜಾಪ್ರಭುತ್ವದಲ್ಲಿ ಎಷ್ಟರ ಮಟ್ಟಿಗೆ ಭೂಷಣ ಎಂದು ಪ್ರಶ್ನಿಸಿದರು.
ಇನ್ನು ಎಲ್ಲದಕ್ಕೂ ಕೂಡ ಜನ ಮುಂದಿನ ದಿನಗಳಲ್ಲಿ ಉತ್ತರ ಕೊಡುತ್ತಾರೆ. ವಿನಾಶಕಾಲೇ ವಿಪರೀತ ಬುದ್ಧಿ ಎಂಬುದು ಇವರ ನಡವಳಿಕೆಯಲ್ಲಿ ಕಾಣುತ್ತಿದೆ. ಅಧಿಕಾರ ಯಾವತ್ತೂ ಕೂಡ ಶಾಶ್ವತ ಆಗಿರುವುದಿಲ್ಲ ಎಂದು ವಿನಯ್ ಕುಮಾರ್ ಸೊರಕೆ ತಿರುಗೇಟು ಕೊಟ್ಟರು.