ಕೋಟ, ಮಾ 25 (DaijiworldNews/MS): ಇದು ಜಾನಕಿ ಅಮ್ಮನ ಪ್ರೇರಣೆ ಈ ಪ್ರಶಸ್ತಿ ಪಡೆದ ನಾನೇ ಪುಣ್ಯವಂತಳು ಎಂದು ಖ್ಯಾತ ಗಾಯಕಿ ಪದ್ಮಭೂಷಣ ಕೆ.ಎಸ್.ಚಿತ್ರ ನುಡಿದಿದ್ದಾರೆ.
ಮನಸ್ಮಿತ ಫೌಂಡೇಶನ್ ಕೋಟ, ಗೀತಾನಂದ ಫೌಂಡೇಶನ್ ಮಣೂರು, ಹಾಗೂ ಯುವ ಮೆರಿಡಿಯನ್ ಸಹಭಾಗಿತ್ವದಲ್ಲಿ ಕೊಡಲ್ಪಡುವ ಡಾ. ಎಸ್. ಜಾನಕಿ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.
ಮನಸ್ಮಿತ ರಾಷ್ಟ್ರೀಯ ಪುರಸ್ಕಾರವನ್ನ ಮನೋವೈದ್ಯ ಡಾ.ಸಿ.ಆರ್. ಚಂದ್ರಶೇಖರ್ ಅವರಿಗೆ ಪ್ರದಾನ ಮಾಡಲಾಯಿತು.ಪ್ರಶಸ್ತಿ ಫಲಕವನ್ನು ಅನಾವರಗೈದ ನಾಡೋಜ ಡಾ. ಜಿ.ಶಂಕರ್ ಮಾತನಾಡಿ ಇರ್ವರಿಗೆ ಪ್ರಶಸ್ತಿ ನೀಡಿದ್ದು ಅರ್ಥಪೂರ್ಣ, ಚಿತ್ರ ಅಂತ ಶ್ರೇಷ್ಠ ಗಾಯಕಿಗೆ ಪ್ರಶಸ್ತಿ ನೀಡುತ್ತಿರುವುದು ಈ ಕರಾವಳಿಭಾಗದ ಹೆಮ್ಮೆ ಇಂಥಹ ಕಾರ್ಯಕ್ರಮಗಳು ಕುಂದಾಪುರದ ಕಂಪನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ ಎಂದರು.
ಅಧ್ಯಕ್ಷತೆಯನ್ನು ಮನಸ್ಮಿತ ಫೌಂಡೇಶನ್ ಪ್ರವರ್ತಕ ಡಾ.ಪ್ರಕಾಶ್ ಸಿ ತೋಳಾರ್ ವಹಿಸಿದ್ದರು.ಅತಿಥಿಗಳಾಗಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್,ಯುವ ಮೆರಿಡಿಯನ್ ಒಪೆರಾ ಪಾರ್ಕ ನ ಪಾಲುದಾರ ವಿನಯ್ ಕುಮಾರ್ ಶೆಟ್ಟಿ,ಗೀತಾನಂದ ಫೌಂಡೇಶನ್ ನಿರ್ದೇಶಕ ಪ್ರಶಾಂತ್ ಕುಂದರ್,ನೇಹಾ ಸತೀಶ್ ಪೂಜಾರಿ,ಕವಿತಾ ಪ್ರಕಾಶ್ ತೋಳಾರ್ ಇದ್ದರು. ಕಾರ್ಯಕ್ರಮ ಸಂಯೋಜಕ ಡಾ.ಸತೀಶ್ ಪೂಜಾರಿ ಸ್ವಾಗತಿಸಿ ಪ್ರಾಸ್ತಾವನೆ ಸಲ್ಲಿಸಿದರು. ಸನ್ಮಾನಪತ್ರವನ್ನು ಡಾ.ಉಮೇಶ್ ಪುತ್ರನ್ ವಾಚಿಸಿದರು.ಕಾರ್ಯಕ್ರಮವನ್ನು ಉಡುಪಿ ತೆಂಕುನಿಡಿಯೂರು ಕಾಲೇಜಿನ ಪ್ರಾಂಶುಪಾಲ ವಿಶ್ವನಾಥ ಕರಬ ನಿರೂಪಿಸಿ ವಂದಿಸಿದರು.
ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರವು ಒಂದು ಲಕ್ಷ ರೂಪಾಯಿ ನಗದು, ಹಾಗೂ ಪ್ರಶಸ್ತಿಯನ್ನು ಒಳಗೊಂಡಿದೆ. ಹಾಗೂ ಮನಸ್ಥಿತ ರಾಷ್ಟ್ರೀಯ ಪುರಸ್ಕಾರವು ಇಪ್ಪತ್ತೈದು ಸಾವಿರ ರೂಪಾಯಿ ನಗದು, ಹಾಗೂ ಪ್ರಶಸ್ತಿಯನ್ನು ಒಳಗೊಂಡಿದೆ. ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕ ಡಾ. ಸತೀಶ್ ಪೂಜಾರಿ ನೇತ್ರತ್ವದಲ್ಲಿ ಕರ್ನಾಟಕದ ಶ್ರೇಷ್ಟ ಗಾಯಕ, ಗಾಯಕಿಯರು ಹಾಗೂ ವಾದ್ಯ ವೃಂದದವರಿಂದ ಅದ್ದೂರಿ ಸಂಗೀತ ಸಂಜೆ ನಡೆಯಿತು. ಎಲ್ಲರಿಗೂ ಉಚಿತ ಪ್ರವೇಶದ ಹಿನ್ನಲೆಯಲ್ಲಿ ಸಾವಿರಾರು ಪ್ರೇಕ್ಷರು ಭಾಗಿಯಾದರು. .ಕೋಟದ ಸಮುದ್ಯತಾ ಗ್ರೂಪ್ಸ್ ಇವೆಂಟ್ ನಿರ್ವಹಿಸಿತು.