ಸುಬ್ರಹ್ಮಣ್ಯ, ಮಾ 25 (DaijiworldNews/DB): ಸುಬ್ರಹ್ಮಣ್ಯದಲ್ಲಿ ಹೊಳೆ ಬದಿಯಲ್ಲಿ ಕಾಡಾನೆ ಕಾಣಿಸಿಕೊಂಡ ಘಟನೆ ಶುಕ್ರವಾರ ನಡೆದಿದೆ.
ಸುಬ್ರಹ್ಮಣ್ಯ ಸಮೀಪದ ಆದಿಸುಬ್ರಹ್ಮಣ್ಯದ ಕಲ್ಲಗಡ್ಡೆ ಎಂಬಲ್ಲಿ ಹೊಳೆ ಬದಿಯಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಹೊಳೆಗೆ ನೀರು ಕುಡಿಯಲು ಬಂದಿದ್ದ ಆನೆ ಬಳಿಕ ಕಾಡಿಗೆ ವಾಪಸ್ಸಾಗಿದೆ ಎಂದು ತಿಳಿದು ಬಂದಿದೆ.
ಐತ್ತೂರು- ಕಡ್ಯ ಕೊಣಾಜೆ ಸಂಪರ್ಕ ರಸ್ತೆಯ ಕೊಣಾಜೆ ಬಳಿಯ ರಾಮನಗರ ಕ್ರಾಸ್ನಲ್ಲಿ ರಸ್ತೆಯ ಒಂದು ಬಂದಿಯಿಂದ ಇನ್ನೊಂದು ಬದಿಗೆ ಕಾಡಾನೆ ದಾಟಿದೆ. ರಬ್ಬರ್ ತೋಟವೊಂದರಿಂದ ಈ ಆನೆ ರಸ್ತೆಗೆ ಇಳಿದಿತ್ತು. ಬಳಿಕ ಆ ರಸ್ತೆಯನ್ನು ದಾಟಿ ಇನ್ನೊಂದು ಬದಿಯಲ್ಲಿರುವ ರಬ್ಬರ್ ತೋಟಕ್ಕೆ ಘೀಳಿಡುತ್ತಾ ಹೋಗಿದೆ. ಸಂಜೆ ಕೆಲಸದಿಂದ ಮನೆಗಳಿಗೆ ರಸ್ತೆ ಮುಖಾಂತರ ಸಾಗುತ್ತಿದ್ದವರಿಗೆ ಕಾಡಾನೆ ಕಾಣ ಸಿಕ್ಕಿದೆ ಎನ್ನಲಾಗಿದೆ. ಕಾಡಾನೆ ನಾಡಿಗೆ ಆಗಮಿಸಿದ್ದರಿಂದ ಇಲ್ಲಿನ ಜನರಲ್ಲಿ ಆತಂಕ ಮನೆ ಮಾಡಿದೆ.