ಕಾಸರಗೋಡು, ಮಾ 24 (DaijiworldNews/SM): ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳ ವಿರುದ್ಧ ನಗರಸಭೆಯ ಆರೋಗ್ಯ ಇಲಾಖೆಯ ವಿಶೇಷ ತಂಡ ತಪಾಸಣೆ ಆರಂಭಿಸಿದ್ದು, ಹಲವು ಅಂಗಡಿ ಗಳಿಗೆ ದಂಡ ವಿಧಿಸಲಾಗಿದೆ.ನಗರದ ಹಳೆ ಬಸ್ಸು ನಿಲ್ದಾಣ ದ ಹಲವು ಅಂಗಡಿಗಳಿಗೆ ಶುಕ್ರವಾರ ದಾಳಿ ನಡೆಸಿದ್ದು, ಸುಮಾರು 35 ಕೆ.ಜಿ ಪ್ಲಾಸ್ಟಿಕ್ ಉತ್ಪನ್ನ ಗಳನ್ನು ವಶ ಪಡಿಸಲಾಗಿದೆ.
ರಸ್ತೆ ಬದಿ ವ್ಯಾಪಾರ ವಹಿವಾಟು ಮಾಡುವವರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಹಳೆ ಬಸ್ಸು ನಿಲ್ದಾಣ ಪರಿಸರದ ಮಾರ್ಜಿನ್ ಫ್ರೀ ಸೂಪರ್ ಮಾರ್ಕೆಟ್ ಗೆ 10 ಸಾವಿರ ರೂ. ದಂಡ ವಿಧಿಸಲಾಗಿದೆ. ವಶಪಡಿಸಿಕೊಂಡ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ನಗರಸಭೆಗೆ ಹಸ್ತಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ತಪಾಸಣೆ ನಸಲಾಗುವುದು. ಜಿಲ್ಲಾ ನೈರ್ಮಲ್ಯ ಮಿಷನ್ ಎನ್ಫೋಸ್ಮೇಂಟ್ ಅಧಿಕಾರಿಯ ನೇತೃತ್ವದಲ್ಲಿ ನಗರಸಭೆಯ ಆರೋಗ್ಯ ಇಲಾಖೆ ಅಧಿಕಾರಿಗಳು, ಆಂತರಿಕ ಜಾಗೃತ ಇಲಾಖೆ ಅಧಿಕಾರಿಗಳು, ಜಿಲ್ಲಾ ಜಂಟಿ ನಿರ್ದೇಶಕರ ಕಚೇರಿಯ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ