ನವದೆಹಲಿ, ನ 4: ಜನವರಿಯಿಂದ ಚಿನ್ನಾಭರಣಗಳ ಮೇಲೆ ಹಾಲ್ ಮಾರ್ಕ್ ಕಡ್ಡಾಯಗೊಳಿಸುವಂತೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.
ಯಾವುದೇ ಆಭರಗಳ ಗುಣಮಟ್ಟ ಗೊತ್ತಾಗಬೇಕಾದರೆ ಹಾಲ್ ಮಾರ್ಕ್ ಇರಲೇ ಬೇಕು. ಇಲ್ಲದಿದ್ದಲ್ಲಿ ಚಿನ್ನದ ಗುಣಮಟ್ಟ ಜನರಿಗೆ ಗೊತ್ತಾಗುವುದಿಲ್ಲ. ಹೀಗಾಗಿ ಜನವರಿಯಿಂದ ಚಿನ್ನಾಭರಣಗಳ ಮೇಲೆ ಬಿ ಐ ಎಸ್ ಹಾಲ್ ಮಾರ್ಕ್ ಕಡ್ಡಾಯವಾಗಲಿದೆ ಎಂದು ತಿಳಿಸಿದ್ದಾರೆ.
ಚಿನ್ನದ ಗುಣಮಟ್ಟ ಪಾರದರ್ಶಕವಾಗಿ ಜನರಿಗೆ ತಿಳಿಯಲು ಹಾಲ್ ಮಾರ್ಕ್ ನಿಂದ ಸಹಾಯವಾಗಲಿದೆ.