ಕಾಸರಗೋಡು, ಮಾ. 21 (DaijiworldNews/SM): ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿಗೆ 62 ವರ್ಷ ಸಜೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಕಾಸರಗೋಡು ಪಾಸ್ಟ್ ಟ್ರಾಕ್ ವಿಶೇಷ (ಪೋಕ್ಸೋ) ನ್ಯಾಯಾಲಯ ಶಿಕ್ಷೆ ವಿಧಿಸಿ ತೀ ರ್ಫು ನೀಡಿದೆ.
ಕುಂಬಳೆ ಬಂಬ್ರಾಣ ದ ಕೆ. ಚಂದ್ರ ಶೇಖರ (56) ಶಿಕ್ಷೆ ಗೊಳಗಾದವನು.ಕಾಸರಗೋಡು ಮತ್ತು ಕುಂಬಳೆ ಠಾಣಾ ಪೊಲೀಸರು ದಾಖಲಿಸಿದ ಎರಡು ಪ್ರತ್ಯೇಕ ಫೋಕ್ಸೋ ಪ್ರಕರಣ ಗಳಿಗೆ ಸಂಬಂಧ ಪಟ್ಟಂತೆ ಶಿಕ್ಷೆ ವಿಧಿ ಸಲಾಗಿದೆ.
ಕಾಸರಗೋಡು ಹಾಗೂ ಕುಂಬಳೆ ಠಾಣೆ ಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಲಾ 31 ವರ್ಷ ಶಿಕ್ಷೆ ವಿಧಿಸಲಾಗಿದೆ .