ಮಂಗಳೂರು, ಮಾ 20(SM): ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿಯ ಸಂಭಾವ್ಯ ಅಭ್ಯರ್ಥಿ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಆರೋಪ ಮಾಡಿ, ಅಪಪ್ರಚಾರ ನಡೆಸಿದ ಆರೋಪಿಯ ವಿರುದ್ಧ ದೂರು ನೀಡಲಾಗಿದೆ.
2014ರಲ್ಲಿ ಸಂಸದ ನಳಿನ್ ವಿರುದ್ಧ ನಡೆಸಿದ್ದ ವೃತ ಆರೋಪವನ್ನು ಮತ್ತೆ ಈ ಬಾರಿಯ ಚುನಾವಣೆಯ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿಸಲಾಗುತ್ತಿದ್ದೆ. ಆ ಮೂಲಕ ಚುನಾವಣೆಯ ಸಂದರ್ಭ ಜನರ ಮನ ಪರಿವರ್ತನೆಗೆ ಪ್ರಯತ್ನಿಸಲಾಗುತ್ತಿದೆ. ಅಲ್ಲದೆ ನಳಿನ್ ಕುಮಾರ್ ಕಟೀಲ್ ಅವರ ವ್ಯಕ್ತಿತ್ವಕ್ಕೆ ತೊಂದರೆಯನ್ನುಂಟು ಮಾಡಲಾಗುತ್ತಿದೆ.
2019ರ ಲೋಕಸಭೆ ಚುನಾವಣೆಗೆ ನಳಿನ್ ಸ್ಪರ್ಧೆ ಖಚಿತ ಎನ್ನುವಾಗ ಮತ್ತೆ ಹಳೇಯ ಸಂದೇಶವೊಂಡನ್ನು ಸಾಮಾಜಿಕ ಜಾಲ ತಾಣಗಳಾಲ್ಲಿ ಹರಿಯ ಬಿಡಲಾಗಿದೆ. ಹರೀಶ್ ಕೊಟ್ಯಾನ್ ಎಂಬಾತ ತನ್ನ ವಾಟ್ಸಪ್ ನಲ್ಲಿ ಸಂಸದರ ವಿರುದ್ಧ ಈ ಹಿಂದೆ ಪ್ರಕಟಿಸಲಾಗಿದ್ದ ಫೋಟೊ ಹಾಗೂ ಬರಹಗಳನ್ನು ರವಾನಿಸುತ್ತಿದ್ದಾನೆ.
ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಗೆ ಅಡ್ವಕೇಟರ್ ಪುರಂದರ ಶೆಟ್ಟಿ ದೂರು ನೀಡಿದ್ದಾರೆ.