ಕಾರ್ಕಳ, ಮಾ 20(SM): ಲೋಕಸಭಾ ಚುನಾವಣೆ ಪ್ರಯುಕ್ತ ಕ್ರಿಮಿನಲ್ ಚಟುವಟಿಕೆಗಳನ್ನು ಹದ್ದುಬಸ್ತಿಯಲ್ಲಿ ಇಡುವ ನಿಟ್ಟಿನಲ್ಲಿ ಕಾರ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ಗಳ ಪೆರೇಡ್ ನಡೆಸಲಾಯಿತು. ಆದರೆ, 101 ರೌಡಿ ಶೀಟರ್ಗಳ ಪೈಕಿ ಕೇವಲ 36 ಮಂದಿ ರೌಡಿಶೀಟರ್ಗಳು ಮಾತ್ರ ಪಾಲ್ಗೊಂಡಿರುವುದು ಗಮನಾರ್ಹವಾಗಿದೆ.
ಅಂದರೆ ಮೂರನೇ ಒಂದು ಭಾಗದಷ್ಟು ಮಾತ್ರ ರೌಡಿಶೀಟರ್ಗಳು ಕಾನೂನು ಪರಿಪಾಲಕರ ಮುಂದೆ ಹಾಜರಾಗಿದ್ದಾರೆ. ನಗರ ಠಾಣೆಯಲ್ಲಿ ರೌಡಿಶೀಟರ್ ಪೆರೇಡ್ ಸಂದರ್ಭದಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಹಾಲ್ಮೂರ್ತಿ ಮಾತನಾಡಿ, ಲೋಕಸಭಾ ಚುನಾವಣೆ ಎದುರಾಗಿದ್ದು, ಯಾವುದೇ ಪಕ್ಷದ, ಯಾವುದೇ ರಾಜಕರಣಿಗಳ ಕಪಿಮುಷ್ಠಿಗೆ ಒಳಗಾಗಿ ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಾರದು. ಅಂತಹ ಕೃತ್ಯಕ್ಕೆ ಇಳಿದರೆ ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ. ಸನ್ನಡತೆಯೊಂದಿಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಹೆಸರುಗಳಿಸಿ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಗರ ಠಾಣಾಧಿಕಾರಿ ನಂಜಾನಾಯಕ್ ಉಪಸ್ಥಿತರಿದ್ದರು.