ಮಂಗಳೂರು, ಮಾ 21 (DaijiworldNews/SM): ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆಯಾಗಿ ಇಂದಿಗೆ ಏಳು ವರ್ಷ ಪೂರ್ಣಗೊಂಡಿದ್ದು, ಹತ್ಯೆ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಕಾರ್ ಸ್ಟ್ರೀಟ್ ಸಮೀಪದಲ್ಲಿ ದೇಶ ಪ್ರೇಮಿ ಒಕ್ಕೂಟದವರಿಂದ ಪ್ರತಿಭಟನೆ ನಡೆಯಿತು. ಹತ್ಯೆ ನಡೆದು ಏಳು ವರ್ಷಗಳು ಕಳೆದರೂ ನ್ಯಾಲಯದಲ್ಲಿ ಕೇಸು ನಡೆಯುತ್ತಿದೆ. ಈ ಪ್ರಕರಣ ಇನ್ನೂ ಇತ್ಯರ್ಥಗೊಂಡಿಲ್ಲ. ಈ ಹಿನ್ನೆಲೆಯಲ್ಲಿ ಬಾಳಿಗಾ ನಡೆದ ದಾರಿಯಲ್ಲಿ ಹೆಜ್ಜೆ ಹಾಕೋಣ ಬನ್ನಿ ಎಂದು ಧರಣಿ ನಡೆಸಲಾಯಿತು. ವೆಂಕಟರಮಣ ದೇವಸ್ಥಾನ ಸಮೀಪದಿಂದ ಬಾಳಿಗಾ ಅವರ ಮನೆಯ ತನಕ ಮೆರವಣಿಗೆ ನಡೆಸಲಾಯಿತು. ಸರಕಾರ ಹಾಗೂ ದುಷ್ಕರ್ಮಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಯಿತು.