ಬೆಳ್ತಂಗಡಿ, ಮಾ 20 (DaijiworldNews/SM): ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಗೆ ಕಡಿವಾಣ ಹಾಕಬೇಕು, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಹಾಗೂ ಕಳಪೆ ಕಾಮಗಾರಿಗಳ ಬಗ್ಗೆ ನ್ಯಾಯಾಂಗ ತನಿಖೆಗೆ ನಡೆಸಬೇಕು ಎಂದು ಒತ್ತಾಯಿಸಿ ಸಿಪಿಐ ಎಂ ಮುಖಂಡ ಸಾಮಾಜಿಕ ಹೋರಾಟಗಾರ ಶೇಖರ ಲಾಯಿಲ ಅವರು ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಏಕಾಂಗಿ ಪ್ರತಿಭಟನೆ ಆರಂಭಿಸಿದ್ದಾರೆ.
ಬೆಳಗ್ಗೆ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನಾ ಧರಣಿ ಆರಂಭಿಸಿದ ಅವರು ಸಂಜೆ 5.30ರ ವರೆಗೂ ಧರಣಿಯನ್ನು ಮುಂದುವರಿಸಿದರು. ಪ್ರತಿಭಟನೆಯ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಶೇಖರ ಲಾಯಿಲ ಅವರು ತಾಲೂಕಿನಲ್ಲಿ ಕೇವಲ ಐದು ಮಂದಿಗೆ ಮಾತ್ರ ನದಿಯಿಂದ ಮರಳು ತೆಗೆಯಲು ಅಧಿಕೃತ ಪರವಾನಿಗೆ ನೀಡಲಾಗಿದೆ ಆದರೆ ತಾಲೂಕಿನ ಎಲ್ಲ ನದಿಗಳಲ್ಲಿ, ತೊರೆಗಳಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ ನೂರಾರು ಕಡೆಗಳಲ್ಲಿ ನಡೆಯುತ್ತಿರುವ ಈ ಮರಳುಗಾರಿಕೆ ವಿರುದ್ದ ಯಾವುದೇ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಅಕ್ರಮ ಮರಳುಗಾರಿಕಯೊಂದಿಗೆ ತಾಲೂಕು ಆಡಳಿತ ಪೊಲೀಸ್ ಇಲಾಖೆ ಕೈಜೋಡಿಸಿದೆ ಎಂಬ ಅನುಮಾನ ಬರುವಂತಾಗಿದೆ. ಮರಳು ಗಾರಿಕೆ ವಿರುದ್ದ ಕ್ರಮ ಕೈಗೊಳ್ಖುವಂತೆ ಎಷ್ಟು ಮನವಿ ಸಲ್ಲಿಸಿದರೂ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಅದರಿಂದಾಗಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದೇನೆ ಎಂದರು. ಅಕ್ರಮ ಮರಳುಗಾರಿಕೆ ತಾಲೂಕಿನಲ್ಲಿ ಕೋಟ್ಯಾಂತರ ಹಣದ ವ್ಯವಹಾರವಾಗಿ ಬೆಳೆದಿದೆ ಈ ಅಕ್ರಮ ಮರಳಿಗಾರಿಕೆಯನ್ನು ನಿಯಂತ್ರಿಸುವವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ಪ್ರಕಟಿಸಿದ್ದಾರೆ.
ತಾಲೂಕಿನಲ್ಲಿ ಅಭಿವೃದ್ದಿಯ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ ಪ್ರವಾಹದ ಬಳಿಕ ನಡೆಸಿದ ಕಾಮಗಾರಿಗಳು ಕಳಪೆಯಾಗಿದ್ದು ನೀರುಪಾಲಾಗಿದೆ, ಅದೇ ರೀತಿ ರಸ್ತೆ ಸೇರಿದಂತೆ ಕಾಮಗಾರಿಗಳು ಕಳಪೆಯಾಗಿದೆ, ಟೆಂಡರ್ ಪ್ರಕ್ರಿಯೆಯಲ್ಲಿ ಯೂ ಭಾರೀ ಅಕ್ರಮ ನಢಯುತ್ತಿದೆ. ನಕಲಿ ಕಂಪನಿಗಳಿಗೆ ಗುತ್ತಿಗೆ ನೀಡಲಾಗುತ್ತಿದೆ ಈ ಎಲ್ಲ ವಿಚಾರಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂಬ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ. ಈ ಬಗ್ಗೆ ಸ್ಪಷ್ಟ ಭರವಸೆ ಸಿಗುವ ವರೆಗೆ ಪ್ರತಿಭಟನೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.