ಮಂಗಳೂರು, ಮಾ 20 (DaijiworldNews/SM): ಬಿಜೆಪಿ ಸರಕಾರ ಜನಸಾಮನ್ಯರ ವಿರುದ್ಧ ನಿರ್ಲಕ್ಷ್ಯ ಧೋರಣೆ ತೋರುತ್ತಿದೆ. ಈ ಸರಕಾರವನ್ನು ಸಾಮರ್ಥ್ಯವಿರುವ ಸರ್ಕಾರ ಎಂದು ಹೇಳಲು ಸಾಧ್ಯವಿಲ್ಲ. ಸರಕಾರ ಪೌರ ಕಾರ್ಮಿಕರ ಬೇಡಿಕೆಯನ್ನು ಕಡೆಗಣಿಸಿದೆ. ಹಲವು ದಿನಗಳಿಂದ ಪೌರ ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಸರಕಾರ ಇವರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಆರೋಪ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರ ಪ್ರತಿಭಟನೆಯಿಂದ ಕಸ ವಿಲೇವಾರಿಯಾಗುತ್ತಿಲ್ಲ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಮೊದಲೇ ಕರ್ನಾಟಕದ ಜನ ಭ್ರಷ್ಟಾಚಾರದ ವಾಸನೆಯಿಂದ ರೋಸಿ ಹೋಗಿದ್ದಾರೆ. ಇದೀಗ ಕಸದ ವಾಸನೆಯಿಂದಲೂ ಜನರಿಗೆ ಸಮಸ್ಯೆಯಾಗಿದೆ. ಈ ಸರ್ಕಾರ ಬಂದ ಮೇಲೆ ವಿವಿಧ ಸರಕಾರಿ ನೌಕರರಿಂದ ಪ್ರತಿಭಟನೆಯಾಗುತ್ತಿದೆ. ಪ್ರತಿಭಟನೆಯ ಮೂಲಕವೇ ಸರ್ಕಾರಿ ನೌಕರರು ತಮ್ಮ ಹಕ್ಕನ್ನು ಪಡೆಯುವ ದುಸ್ಥಿತಿ ಎದುರಾಗಿದೆ. ಬೇಡಿಕೆ ನೀಡಿದರು ಈ ಸರಕಾರ ಇವರನ್ನು ಸತಾಯಿಸುತ್ತದೆ ಎಂದು ಆರೋಪಿಸಿದ್ದಾರೆ.
ಆಶಾಕಾರ್ಯಕರ್ತೆಯರು,ಅಂಗನವಾಡಿ ಶಿಕ್ಷಕಿಯರು ಸೇರಿದಂತೆ ಅನೇಕರಿಂದ ಪ್ರತಿಭಟನೆ ನಡೆಸಿದ್ದಾರೆ. ವೇತನ ಪರಿಷ್ಕರಿಸುವಂತೆ ಹಲವು ಇಲಾಖೆಯಿಂದ ಬೇಡಿಕೆಯಿದ್ದರೂ ಸ್ಪಂದನೆಯಿಲ್ಲ. ಅದೇ ಕಾಂಗ್ರೆಸ್ ಸರಕಾರವಿದ್ದಾಗ ಬೇಡಿಕೆಗೂ ಸ್ಪಂದನೆ ನೀಡುತ್ತಿದ್ದೇವು. ಬಿಜೆಪಿ ಸರಕಾರಕ್ಕೆ 35 ದಿವಸ ಮಾತ್ರ ಆಯುಷ್ಯವಿದೆ. ಇದಕ್ಕೂ ಮುನ್ನವೇ ಶಟರ್ ಬಂದ್ ಆಗಿದೆ. ಕುಡಿಯುವ ನೀರಿಗೆ ಪ್ರತಿ ಗ್ರಾಮದಲ್ಲೂ ಸಂಕಷ್ಟ ಪಡುತ್ತಿದ್ದಾರೆ ಎಂದು ಮಂಗಳೂರಿನಲ್ಲಿ ವಿಧಾನ ಪರಿಷತ್ ವಿಪಕ್ಷ ಉಪನಾಯಕ ಯುಟಿ ಖಾದರ್ ಆರೋಪ ಮಾಡಿದ್ದಾರೆ.