ಮಂಗಳೂರು, ಮಾ 20 (DaijiworldNews/HR): ವಿಶ್ವ ಕಿಡ್ನಿ ದಿನವು ವಾರ್ಷಿಕ ಜಾಗತಿಕ ಅಭಿಯಾನವಾಗಿದ್ದು, ನಮ್ಮ ಮೂತ್ರಪಿಂಡಗಳ ಪ್ರಾಮುಖ್ಯತೆ ಮತ್ತು ವಿಶ್ವದಾದ್ಯಂತ ಮೂತ್ರಪಿಂಡ ಕಾಯಿಲೆ ಮತ್ತು ಸಂಬಂಧಿತ ಆರೋಗ್ಯ ಸಮಸ್ಯೆಗಳ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸುವ ಗುರುಯನ್ನು ಹೊಂದಿದೆ. ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಮಾರ್ಚ್ನ ಎರಡನೇ ಗುರುವಾರದಂದು ನಡೆಸಲಾಗುತ್ತದೆ.
ಎಲ್ಲರಿಗೂ ಮೂತ್ರಪಿಂಡದ ಆರೋಗ್ಯವನ್ನು ಉತ್ತೇಜಿಸುವ ಗುರಿಯೊಂದಿಗೆ ತಡೆಗಟ್ಟುವ ನಡವಳಿಕೆಗಳು, ಅಪಾಯಕಾರಿ ಅಂಶಗಳು ಮತ್ತು ಮೂತ್ರಪಿಂಡ ಕಾಯಿಲೆಯೊಂದಿಗೆ ಹೇಗೆ ಬದುಕಬೇಕು ಎಂಬುದರ ಕುರಿತು ಜಾಗೃತಿಯನ್ನು ಮೂಡಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಇದರ ಪ್ರಯುಕ್ತ ಮಂಗಳಾ ಕಾಲೇಜ್ ಆಫ್ ಅಲ್ಲೈಡ್ ಹೆಲ್ತ್ ಸೈನ್ಸ್ಸ್, ಮಂಗಳಾ ಕಿಡ್ನಿ ಪೌಂಡೇಶನ್, ಮಂಗಳಾ ಸ್ಟೂಡೆಂಟ್ಸ್ ಕೌನ್ಸಿಲ್ ಅಲೂಮಿನೈ ಅಸೋಸಿಯೇಶನ್, ಎನ್.ಎಸ್.ಎಸ್ ಘಟಕ ಮತ್ತು ರೆಡ್ ಕ್ರಾಸ್ ಘಟಕದ ಸಹಯೋಗದಲ್ಲಿ 2023ರ ವಿಶ್ವ ಕಿಡ್ನಿ ದಿನಾಚರಣೆಯ ಬಗ್ಗೆ ಅರಿವು ಮೂಡಿಸಲು 5ಕಿ.ಮೀ. ಓಟವನ್ನು ಆಯೋಜಿಸಲಾಗಿತ್ತು ಇದರಲ್ಲಿ 500ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳೂ, ಶಿಕ್ಷಕ ವೃಂದ ಮಂಗಳ ಆಸ್ಪತ್ರೆಯ ಸಿಬ್ಬಂಧಿ ವರ್ಗ ಪಾಲುಗೊಂಡಿದ್ದರು.
ಮಂಗಳೂರು ಸಂಚಾರ ವಿಭಾಗದ ಸಹಾಯಕ ಪೋಲಿಸ್ ಆಯುಕ್ತರಾದ ಶ್ರೀಮತಿ ಗೀತಾ ಡಿ. ಕುಲಕರ್ಣಿಯವರು ಮುಖ್ಯ ಅತಿಥಿಯಾಗಿ ಮತ್ತು ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ್ದರು. ಇವರು ಸಂದರ್ಬೋಚಿತವಾಗಿ ಮಾತನಾಡಿ, ಕಿಡ್ನಿ ಆರೋಗ್ಯದ ಬಗ್ಗೆ ಕಾಳಜಿವಹಿಸಲು ಕರೆನೀಡಿದರು ಮತ್ತು ಸಂಚಾರ ನಿಯಮವನ್ನು ಪಾಲಿಸಿ ಮಾನವ ಜೀವ ಮತ್ತು ಆರೋಗ್ಯ ರಕ್ಷಣೆಯ ಕಾರ್ಯದಲ್ಲಿ ಸಕ್ರೀಯವಾಗಿ ಸ್ಪಂದಿಸಲು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗ ಮನವಿ ಮಾಡಿದರು.
ಶ್ರೀಮತಿ ಗೀತಾ ಡಿ. ಕುಲಕರ್ಣಿಯವರು ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ ಇಂತಹ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಸಮಾಜಕ್ಕೆ ಉತ್ತಮ ಸಂದೇಶವನ್ನು ಮತ್ತು ಆರೋಗ್ಯದ ಬಗ್ಗೆ ಅರಿವನ್ನು ಮೂಡಿಸುವ ಮಂಗಳ ಅಲ್ಲೈಡ್ ಹೆಲ್ತ್ ಸೈನ್ಸ್ಸ್ ಕಾಲೇಜಿನ ಆಡಳಿತ ವರ್ಗಕ್ಕೆ ಮತ್ತು ಅದರ ಸಕ್ರೀಯ ಕಾರ್ಯಕರ್ತರಿಗೆ ಶುಭ ಹಾರೈಸಿದರು.
ಮಂಗಳಾ ಕಿಡ್ನಿ ಪೌಂಡೇಶನ್ನ ನಿರ್ದೇಶಕರಾದ ಡಾ. ಮೊಯ್ದೀನ್ ನಫ್ಸೀರ್ರವರು ಕಿಡ್ನಿ ಆರೋಗ್ಯದ ಬಗ್ಗೆ ಹಾಗೂ ಕಿಡ್ನಿ ರಕ್ಷಣೆಯ ವಿಷಯದಲ್ಲಿ ಹೆಚ್ಚಿನ ಮಾಹಿತಿಯನ್ನು ಒದಗಿಸಿದರು. ಕಾಲೇಜಿನ ಪ್ರಾಂಶುಪಾಲೆ ಪ್ರೊ. ಪ್ರತಿಜ್ಞಾ ಸುಹಾಸಿನಿ, ಉಪ ಪ್ರಾಂಶುಪಾಲೆ ಪ್ರೊ. ಗೀತಾಲಕ್ಷ್ಮಿ, ನ್ಯೂ ಮಂಗಳ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಮೇರಿ ಎಲಿಜಬೆತ್ ಪಿಂಟೋ, ಅಲ್ಲದೆ ಮಂಗಳ ಫಿಸಿಯೋತೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಭರತ್ ಕೆ. ಎಚ್ ಭಾಗವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಜಯಂತ್ ನಾಯಕ್, ಎನ್.ಎಸ್.ಎಸ್ ಕಾರ್ಯಕ್ರಮಧಿಕಾರಿ ಮಿತುನ್, ವೈಆರ್ಸಿ ಘಟಕದ ಸಂಯೋಜಕಿ ವಿಜೇತಾ, ಅಲೈಡ್ ಹೆಲ್ತ್ ಸೈನ್ಸ್ಸ್ ವಿದ್ಯಾರ್ಥಿ ಪರಿಷತ್ ಅಧ್ಯಕ್ಷೆ ರೆನಿಟಾ, ಹಾಗೂ ಅರೆವೈದ್ಯಕೀಯ ವಿಜ್ಞಾನ ಪರಿಷತ್ ಅಧ್ಯಕ್ಷ ಭರತ್ ಉಪಸ್ಥಿತರಿದ್ದರು.
ಕಾಲೇಜಿನ ಹಳೆ ವಿದ್ಯಾರ್ಥಿಸಂಘವು ಮಂಗಳೂರು ಮತ್ತು ಮಂಜೇಶ್ವರ ಸುತ್ತಮುತ್ತಲಿನ ವಿವಿದೆಡೆಗಳಿಂದ ಬರುವ ಡಯಾಲಿಸಿಸ್ ಅರ್ಹ ರೋಗಿಗಳಿಗೆ ಡಯಾಲೈಸರ್ಗಳನ್ನು ನೀಡಲು ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿ ಸಂಘದ ಉಪಾದ್ಯಕ್ಷ ಶ್ರೀಯುತ ಅಬುಬಕರ್ರವರು ವ್ಯವಸ್ಥೆ ಮಾಡಿ, ಡಯಾಲೈಸರ್ ಗಳನ್ನು ವಿದ್ಯಾರ್ಥಿ ಮುಖಂಡರಿಗೆ ಹಸ್ತಾಂತರಿಸಿದರು. ಒಟ್ಟಾರೆಯಾಗಿ ಈ ಕಾರ್ಯಕ್ರಮದ ಅಂಗವಾಗಿ ನಡೆದ 5ಕೆ ಓಟ ಮಂಗಳಾ ಆಸ್ಪತ್ರೆ ಮತ್ತು ಕಿಡ್ನಿ ಫೌಂಡೇಶನ್ನಿಂದ ಹೊರಟು ನಂತೂರು ಮಾರ್ಗವಾಗಿ ಕದ್ರಿ ಮೈದಾನದಲ್ಲಿ ಸಮಾರೋಪ ಸಮಾರಂಭದೊಡನೆ
ಮುಕ್ತಾಯವಾಯಿತು.