ಮಂಗಳೂರು, ಮಾ 19 (DaijiworldNews/SM): ಅಕ್ರಮವಾಗಿ ಮರಳು ದಾಸ್ತಾನಿರಿಸಿರುವುದು ಪತ್ತೆಯಾಗಿದ್ದು ಪೊಲೀಸರು ಕಾರ್ಯಾಚರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಸುರತ್ಕಲ್ ಹಾಗೂ ಚೇಳ್ಯಾರುಗಳಲ್ಲಿ ಮರಳು ದಾಸ್ತಾನಿರಿಸಲಾಗಿತ್ತು.
ಕಾರ್ಯಾಚರಣೆ ನಡೆಸಿದ ಪೊಲೀಸರು ಹಾಗೂ ಗಣಿ ಅಧಿಕಾರಿಗಳು ಒಟ್ಟು 250 ಲೋಡ್ ಮರಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುರತ್ಕಲ್ ನ ಮುಂಚೂರು ಎಂಬಲ್ಲಿ 100 ಲೋಡ್ ಮರಳು ಅಕ್ರಮವಾಗಿ ದಾಸ್ತಾನಿರಿಸಲಾಗಿತ್ತು. ಚೇಳ್ಯಾರು ಗ್ರಾಮ ದಲ್ಲಿ 150 ಲೋಡ್ ನಷ್ಟು ಮರಳು ಪತ್ತೆಯಾಗಿದೆ.
ಅಕ್ರಮವಾಗಿ ದಾಸ್ತಾನಿರಿಸಿದ್ದ ಮರಳಿನ ದರ 35 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಗಣಿ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಮರಳು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಮರಳು ದಾಸ್ತಾನಿರಿಸಿದ್ದ ಜಮೀನಿನ ಮಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇನ್ನೊಂದೆಡೆ ಮರಳು ಮಾಫಿಯಾದ ಸದ್ದು ದೊಡ್ಡದಾಗಿಯೇ ಕೇಳಿಬಂದಿದ್ದು, ಇತ್ತೀಚಿಗೆ ಮರಳಿನ ಲಭ್ಯತೆ ಇದ್ದು, ಕಡಿಮೆ ದರರಲ್ಲಿ ಸಿಕ್ಕ ಮರಳನ್ನು ಸಂಗ್ರಹಿಸಿಟ್ಟು, ಮಳೆಗಾಲದಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಸಿದ್ಧತೆ ನಡೆಸಲಾಗಿದೆ.