ಕಾಸರಗೋಡು, ಮಾ 18(DaijiworldNews/MS): ವಿವಾಹ ನಿಶ್ಚಯವಾಗಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪುಲ್ಲೂರು ಪೆರಿಯದಲ್ಲಿ ನಡೆದಿದೆ.
ಚಾಲಿಂಗಾಲ್ ನ ಸಂಶುದ್ದೀನ್ ರವರ ಪುತ್ರಿ ಫಾತಿಮಾ (18) ಮೃತಪಟ್ಟವಳು.
ಮನೆಯವರು ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಘಟನೆ ನಡೆದಿದ್ದು , ಮನೆಯವರು ಮರಳಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ. ಅಂಬಲತ್ತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.