ಮಂಗಳೂರು, ಮಾ 18 (DaijiworldNews/DB): ರೋಹನ್ ಕಾರ್ಪೊರೇಷನ್ ಟೈಮ್ಸ್ ಆಫ್ ಇಂಡಿಯಾ ಎಮರ್ಜಿಂಗ್ ಪ್ರಾಜೆಕ್ಟ್ ಆಫ್ ದಿ ಇಯರ್ ಪ್ರಶಸ್ತಿ-2023ನ್ನು ಪಡೆದುಕೊಂಡಿದೆ.
ಮಾರ್ಚ್ 14ರಂದು ಮೈಸೂರಿನ ಸೈಲೆಂಟ್ ಶೋರ್ಸ್ ರೆಸಾರ್ಟ್ ಮತ್ತು ಸ್ಪಾದಲ್ಲಿ ನಡೆದ ಟೈಮ್ಸ್ ಬ್ಯುಸಿನೆಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಮಂಗಳೂರಿನ ರೋಹನ್ ಕಾರ್ಪೋರೇಶನ್ ಕಾರ್ಪೋರೇಷನ್ ಪ್ರೈವೆಟ್ ಸಂಸ್ಥೆಯ ಅಧ್ಯಕ್ಷ ರೋಹನ್ ಮೊಂತೆರೋ ಅವರ ರೋಹನ್ ಸಿಟಿ ಪ್ರಾಜೆಕ್ಟ್ಗೆ ಟೈಮ್ಸ್ ಆಫ್ ಇಂಡಿಯಾ ಎಮರ್ಜಿಂಗ್ ಪ್ರಾಜೆಕ್ಟ್ ಆಫ್ ದಿ ಇಯರ್ ಪ್ರಶಸ್ತಿ-2023ನ್ನು ಪ್ರದಾನ ಮಾಡಲಾಯಿತು. ಜನರಲ್ ಮ್ಯಾನೇಜರ್ (ಸೇಲ್ಸ್ ಮಾರ್ಕೆಟಿಂಗ್) ದೀಮಂತ್ ಸುವರ್ಣ ಹಾಗೂ ಅಲ್ಫೋನ್ಸ್ ಫೆರ್ನಾಂಡಿಸ್ (ಸೇಲ್ಸ್ ಅಸೋಸಿಯೇಟ್) ಪ್ರಶಸ್ತಿ ಸ್ವೀಕರಿಸಿದರು.
ಪ್ರತಿಷ್ಠಿತ ಸಂಸ್ಥೆಗಳಾದ ವಿದ್ಯಾವರ್ಧಕ ಶಿಕ್ಷಣ ಟ್ರಸ್ಟ್, ಲಲಿತಾ ಜ್ಯುವೆಲ್ಲರಿ, ಎಸ್ಸಿಡಿಸಿಸಿ ಬ್ಯಾಂಕ್, ರೋಹನ್ ಕಾರ್ಪೊರೇಷನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸೇರಿದಂತೆ ಒಟ್ಟು 37 ಸಂಸ್ಥೆಗಳು ಪ್ರಶಸ್ತಿ ಸ್ವೀಕರಿಸಿದವು.
ನಟಿ ರಾಶಿ ಖನ್ನಾ ಪ್ರಶಸ್ತಿ ಪ್ರದಾನ ಮಾಡಿದರು. ಮೈಸೂರು ವಿಶ್ವವಿದ್ಯಾನಿಲಯದ ಮಾಜಿ ಉಪಕುಲಪತಿ ಕೆ.ಎಸ್. ರಂಗಪ್ಪ ಗೌರವ ಅತಿಥಿಯಾಗಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದ ಬಳಿಕ ಮೈಸೂರಿನ ತ್ರಿಶೂಲಿ ನೃತ್ಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಮೀರ್ ರಾವ್ ಹಾಗೂ ಆದರ್ಶ್ ಶೆಣೈ ಅವರಿಂದ ಬಾನ್ಸುರಿ-ತಬಲಾ ಕಾರ್ಯಕ್ರಮ ನಡೆಯಿತು.