ಮಂಗಳೂರು, ಮಾ 18(DaijiworldNews/MS): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಪ್ರತ್ಯೇಕ ಪ್ರಕರಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ದುಬೈನಿಂದ ಬಂದ ಪ್ರಯಾಣಿಕರಿಂದ 90 ಲಕ್ಷ ರೂ.ಮೌಲ್ಯದ ಕಳ್ಳಸಾಗಾಣಿಕೆ ಮಾಡಲಾಗುತ್ತಿದ್ದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಮೂವರು ಪ್ರಯಾಣಿಕರಿಂದ ಮಾರ್ಚ್ 1 ರಿಂದ ಮಾರ್ಚ್ 15 ರ ಅವಧಿಯಲ್ಲಿ ಅಧಿಕಾರಿಗಳು 90 ಲಕ್ಷದ 67 ಸಾವಿರದ 750 ರೂ. ಮೌಲ್ಯದ 1,606 ಗ್ರಾಂ 24 ಕ್ಯಾರೆಟ್ ಶುದ್ಧತೆಯ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ವಿವಿಧ ವಿಧಾನಗಳಲ್ಲಿ ಪೇಸ್ಟ್ ರೂಪದಲ್ಲಿ ಮರೆಮಾಡಿ ಕಳ್ಳ ಸಾಗಾಣಿಕೆ ಮಾಡಲಾಗುತ್ತಿತ್ತು.
21 ತಿಂಗಳ ಹೆಣ್ಣು ಮಗುವಿನ ಡೈಪರ್ ನಲ್ಲಿ ತಂದೆ ಚಿನ್ನವನ್ನು ಮರೆಮಾಚಿ ಡೈಪರ್ ಗೆ ತೊಡಿಸಿ ಅದರಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಪೌಚ್ ನಲ್ಲಿ ಇರಿಸಿದ್ದ. ಮತ್ತೋರ್ವ ಗುದ ನಾಳದಲ್ಲಿ ಮಾತ್ರೆಗಳ ರೂಪದಲ್ಲಿ ಬಚ್ಚಿಟ್ಟು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಎಂದು ಅಧಿಕಾರಿಗಳು ವಿವರ ನೀಡಿದ್ದಾರೆ. ಟ್ರಾಸರ್ ನ ಸೊಂಟ ಪಟ್ಟಿಯಲ್ಲಿ ಚಿನ್ನ ಅಡಗಿಸಿಟ್ಟು ಸಾಗಾಟ ಮಾಡಲಾಗುತ್ತಿತ್ತು. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.