ಮಂಗಳೂರು, ಮಾ 20(MSP): ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಪ್ರಥಮ ದಿನವಾದ ಮಂಗಳವಾರ ಲೋಕ್ ತಾಂತ್ರಿಕ್ ಪಕ್ಷದ ಹೆಸರಿನಿಂದ ಸುಪ್ರೀತ್ ಕುಮಾರ್ ಪೂಜಾರಿ ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಸುವುದೇ ಇವರ ಹವ್ಯಾಸವಾಗಿದೆ.
2008ರಲ್ಲಿ ಜೆಡಿಯು, 2013 ರಲ್ಲಿ ಎನ್ ಸಿಪಿ, 2014 ರಲ್ಲಿ ಎಚ್ ಜೆಪಿ2018 ರಲ್ಲಿ ಎಲ್ ಎಡಿ , ಇದೀಗ 2019 ರಲ್ಲಿ ಎಲ್ ಜೆಡಿ.ಹೀಗೆ ಕಳೆದ ಐದು ಚುನಾವಣೆಯಲ್ಲಿ ೫ ಪಕ್ಷದ ಅಭ್ಯರ್ಥಿ ಇದು ಸುಪ್ರೀತ್ ಅವರ ಸ್ಪೆಶಾಲಿಟಿ.
ಈ ಬಾರಿ ಅವರು ಬಿಹಾರದ ಶರದ್ ಯಾದವ್ ಸ್ಥಾಪಿಸಿದ ಲೋಕ್ ತಾಂತ್ರಿಕ ಜನತಾದಳದ ಅಭ್ಯರ್ಥಿಯಾಗಿದ್ದಾರೆ. ನಾಮಪತ್ರ ಸಲ್ಲಿಕೆಯ ಮೊತ್ತವನ್ನು ಪಕ್ಷದ ಕಾರ್ಯ ಕರ್ತರು ಭರಿಸುತ್ತಾರೆ. ಮುಂದೆ ಮನೆ ಮನೆ ಪ್ರಚಾರ ಮಾಡುತ್ತೇನೆ. ನಾನು ಹವ್ಯಾಸಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ. ಹಣ ಇಲ್ಲದವರೂ ಸ್ಪರ್ಧಿಸಬಹುದು. ಕಾಂಗ್ರೆಸ್ - ಬಿಜೆಪಿ ಬಿಟ್ಟರೆ ಬೇರೊಬ್ಬ ಅಭ್ಯರ್ಥಿಯೂ ಇದ್ದಾನೆ ಎಂದು ತೋರಿಸಿಕೊಡುವುದು ನನ್ನ ಉದ್ದೇಶ ಎನ್ನುತ್ತಾರೆ ಸುಪ್ರೀತ್