ಬಂಟ್ವಾಳ, ಮಾ 16 (DaijiworldNews/HR): ಕಳೆದ ಬಾರಿ ರಾಜಕೀಯ ಪ್ರಬುದ್ದತೆಯ ಕೊರತೆಯಿಂದ ಕಾಂಗ್ರೆಸ್ ಪಕ್ಷವನ್ನು ನಂಬಿ ಸೋತಿದ್ದೇವೆ, ಈ ಬಾರಿ ಅಂತಹ ಮಹಾ ತಪ್ಪು ಮಾಡುವುದಿಲ್ಲ, 2023 ರ ವಿಧಾನಸಭಾ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಎಸ್. ಡಿ.ಪಿ.ಐ.ಪಕ್ಷದ ಅಭ್ಯರ್ಥಿ ಇಲ್ಯಾಸ್ ತುಂಬೆ ತಿಳಿಸಿದ್ದಾರೆ.
ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನ ಹಿರಿಯ ಪ್ರಭಾವಿ ನಾಯಕರ ವಿನಂತಿಯಂತೆ ಎರಡು ಶರತ್ತಿನ ಮೇಲೆ ಒಪ್ಪಂದ ವಾಗಿತ್ತು. ಮೂರು ಕ್ಷೇತ್ರದಲ್ಲಿ ಮಾತ್ರ ಎಸ್.ಡಿ.ಪಿ.ಐ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದು, ಉಳಿದ ಎಲ್ಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ಸಹಕಾರ ನೀಡುವ ಒಪ್ಪಂದವಾಗಿತ್ತು. ಆದರೆ ಚುನಾವಣೆಯ ಸಂದರ್ಭದಲ್ಲಿ ಅವರು ನೀಡಿದ ಮಾತನ್ನು ಪಾಲಿಸಿಲ್ಲ, ಅದೇ ನಾಯಕನ ಸೂಚನೆಯಂತೆ ಗೇಮ್ ಪ್ಲಾನ್ ನಂತೆ ಕಾಂಗ್ರೇಸಿಗರು ಬಿಜೆಪಿ ಗೆ ಸೇರಿ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ಇದು ಕಾಂಗ್ರೆಸ್ ವಿಶ್ವಾಸ ದ್ರೋಹದ ಕೆಲಸ ಎಂದು ಟೀಕಿಸಿದರು.
ಇನ್ನು ಕಳೆದ ಬಾರಿ ಪಕ್ಷದ ತಪ್ಪು ನಿರ್ಧಾರದಿಂದ ಪಕ್ಷದ ಸಂಘಟನೆಗೆ ಬಲಬಾದ ಹೊಡೆದ ಬಿದ್ದಿದೆ. ಹೀಗಾಗಿ ಈ ಬಾರಿ ಅಂತಹ ತಪ್ಪುಮರುಕಳಿಸದಂತೆ ಮತ್ತು ತಲಮಟ್ಟದಿಂದ ಪಕ್ಷ ಸಂಘಟನೆಗೆ ವಿಶೇಷ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.