ಮಣಿಪಾಲ, ಮಾ 15 (DaijiworldNews/MS): ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಸಮಯದಲ್ಲಿ ವ್ಯಾನಿಟಿ ಬ್ಯಾಗ್ ನಲ್ಲಿದ್ದ ಬಂಗಾರದ ಒಡವೆಗಳನ್ನು ಎಗರಿಸಿದ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ದೂರು ದಾಖಲಾಗಿದೆ.
ಸಾಂದರ್ಭಿಕ ಚಿತ್ರ
ಪುನೀತ ವಸಂತ್ ಹೆಗ್ಡೆ ತಮ್ಮ ಕುಟುಂಬದೊಂದಿಗೆ ಮುಂಬಿಯಿಗೆ ಹೋಗಲು ಮಾ.14 ರಂದು ಮಂಗಳೂರು – ಮುಂಬಯಿ ಎಕ್ಸ್ ಪ್ರೆಸ್ ರೈಲು ನಂಬ್ರ 12134 ರಲ್ಲಿ ಏರಿದ್ದರು. ಇದಕ್ಕೂ ಮುನ್ನ ತಮ್ಮ ವ್ಯಾನಿಟಿ ಬ್ಯಾಗ್ ನಲ್ಲಿ ಬಂಗಾರದ ಒಡವೆಗಳನ್ನು ಒಂದು ಕವರ್ ನಲ್ಲಿ ಹಾಕಿ ಬಟ್ಟೆಗಳ ಮಧ್ಯೆ ಇಟ್ಟಿದ್ದು ಬ್ಯಾಗನ್ನು ಹೆಗಲಿನಲ್ಲಿ ಹಾಕಿಕೊಂಡಿದ್ದರು. ಇಂದ್ರಾಳಿ ರೈಲು ನಿಲ್ದಾಣದಿಂದ ರೈಲು ಹೊರಟಿದ್ದು ಸೀಟ್ ನಲ್ಲಿ ಕುಳಿತಾಗ ಪುನೀತ ಅವರ ವ್ಯಾನಿಟಿ ಬ್ಯಾಗ್ ಝಿಫ್ ತೆರೆದಿರುವುದು ಕಂಡು ಬಂದಿದ್ದು, ಬ್ಯಾಗ್ ಪರಿಶೀಲಿಸಿದಾಗ ಬ್ಯಾಗ್ ನ ಓಳಗೆ ಇಟ್ಟಿದ್ದ ಬಂಗಾರದ ಒಡೆವೆಗಳ ಕವರ್ ಕಾಣೆಯಾಗಿತ್ತು.
ಮಧ್ಯಾಹ್ನ 03:35 ಗಂಟೆಗೆ ಇಂದ್ರಾಳಿ ರೈಲು ನಿಲ್ದಾಣದಲ್ಲಿ ರೈಲು ಹತ್ತುವ ಸಮಯ ಯಾರೋ ಕಳ್ಳರು ವ್ಯಾನಿಟಿ ಬ್ಯಾಗ್ ಝಿಫ್ ನ್ನು ತೆರೆದು ಬ್ಯಾಗ್ ನಲ್ಲಿದ್ದ ಬಂಗಾರದ ಒಡವೆಗಳನ್ನು ಹಾಗೂ ವ್ಯಾಚ್ ನ್ನು ಕಳವು ಮಾಡಿದ್ದಾರೆ. ಕಳುವಾದ ಚಿನ್ನಾಭರಣಗಳ ಅಂದಾಜು ತೂಕ 100 ಗ್ರಾಂ ಆಗಿದ್ದು, ಅಂದಾಜು ಮೌಲ್ಯ 4,00,000 ಆಗಿರುತ್ತದೆ, ಹಾಗೂ ಕಳುವಾದ ವ್ಯಾಚ್ ನ ಅಂದಾಜು ಬೆಲೆ 3000 ಆಗಿರುತ್ತದೆ, ಕಳುವಾದ ಸ್ವತ್ತುಗಳ ಒಟ್ಟು ಮೌಲ್ಯ 4,03,000 ರೂಪಾಯಿ ಆಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2023 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.