ಮಂಗಳೂರು, ಮಾ 14 (DaijiworldNews/SM): ಸಿಒಡಿಪಿ ಹಾಗೂ ನೀರುಮಾರ್ಗದ ಪ್ರಶಾಂತ್ ಧಾಮ ವತಿಯಿಂದ ಮದ್ಯಪಾನ ಮುಕ್ತಿಗಾಗಿ ಉಚಿತ ವಾಸ್ತವ್ಯ ಚಿಕಿತ್ಸಾ ಶಿಬಿರ ಮಾರ್ಚ್ 26ರಿಂದ ಎಪ್ರಿಲ್ 1ರ ತನಕ ಪ್ರಶಾಂತ್ ಧಾಮದಲ್ಲಿ ಆಯೋಜಿಸಲಾಗಿದೆ.
ನಗದರ ನೀರುಮಾರ್ಗ ಬಸ್ ನಿಲ್ದಾಣ ಸಮೀಪದ ಭಜನಾ ಮಂದಿರ ರಸ್ತೆಯಲ್ಲಿರುವ ಪ್ರಶಾಂತ್ ಧಾಮದಲ್ಲಿ ಉಚಿತ ವಾಸ್ತವ್ಯ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಎಪ್ರಿಲ್ 1ರ ಶನಿವಾರ ಬೆಳಗ್ಗೆ 10ರಿಂದ 12ರ ತನಕ ಶಿಬಿರಾರ್ಥಿಗಳ ಕುಟುಂಬದವರಿಗೆ ವಿಶೇಷ ಮಾಹಿತಿ ಸಭೆ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಮಾರ್ಚ್ 26ರಂದು ಬೆಳಗ್ಗೆ 11 ಗಂಟೆಗೆ ಶಿಬಿರ ಆರಂಭಗೊಳಲ್ಲಿದೆ. ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಇತ್ತೀಚಿಗೆ ಅಮಲು ಸೇವನೆಯಿಂದಾಗಿ ಹಲವರಿ ಗಂಭೀರವಾದ ಆರೋಗ್ಯ ಸಮಸ್ಯೆ ಕಾಡುತ್ತಿದೆ. ಮತ್ತೊಂದೆಡೆ ಕೌಟಂಬಿಕ ಸಮಸ್ಯೆಯೂ ಕೂಡ ಕಾಡುತ್ತಿದೆ. ಇದರಿಂದ ಮುಕ್ತಿಹೊಂದಲು ಶಿಬಿರ ಆಯೋಜನೆ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7892658650, 9880936726, 0824 2221580.