ಕಾಸರಗೋಡು, ಮಾ 14 (DaijiworldNews/SM): ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕಾಸರಗೋಡಿನ ಇಬ್ಬರಿಂದ ಸುಮಾರು 81 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ನಿಲ್ದಾಣ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಶಾರ್ಜಾದಿಂದ ಬಂದ ಕಾಸರಗೋಡು ಸೂರ್ಲು ನಿವಾಸಿ ಅಬ್ದುಲ್ ಲತೀಫ್’ನಿಂದ ಸುಮಾರು 65.50 ಲಕ್ಷ ರೂ. ಮೌಲ್ಯದ 1157 ಗ್ರಾಂ. ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕಾಲಿನ ಸೋಕ್ಸ್’ನೊಳಗೆ ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇನ್ನೊಂದು ಪ್ರಕರಣದಲ್ಲಿ ಚಟ್ಟಂಚಾಲ್’ನ ಸಲ್ಮಾನ್ ಫಾರಿಸ್ ಎಂಬಾತನ ಬಳಿಯಿಂದ ಸುಮಾರು 16 ಲಕ್ಷ ರೂ. ಮೌಲ್ಯದ 294 ಗ್ರಾಂ. ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ನಾನ್’ಸ್ಟಿಕ್ ಕುಕ್ಕರ್’ನೊಳಗೆ ಬಚ್ಚಿಟ್ಟು ಸಾಗಿಸಿದ್ದ ಎಂದು ತಿಳಿದುಬಂದಿದೆ.