ಕಾಸರಗೋಡು, ಮಾ 14 (DaijiworldNews/SM): ಮಂಜೇಶ್ವರ ವಿಧಾನಸಭಾ ಚುನಾವಣಾ ಲಂಚ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಪೂರ್ವ ಭಾವಿಯಾಗಿ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಮೇ 20ರಂದು ಹಾಜರಾಗುವಂತೆ ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಸೇರಿದಂತೆ ಆರು ಆರೋಪಿಗಳಿಗೆ ನ್ಯಾಯಾಲಯ ನೋಟಿಸ್ ನೀಡಿದೆ.
ವಿಚಾರಣೆ ಮೊದಲು ಎಲ್ಲಾ ಆರೋಪಿಗಳ ಮುಂದೆ ಆರೋಪ ಪಟ್ಟಿ ಮುಂದಿಡಲಾಗುವುದು. 2023ರ ಜನವರಿ 10ರಂದು ಪ್ರಕರಣದ ಬಗ್ಗೆ ಕ್ರೈಂ ಬ್ರಾಂಚ್ ಡಿವೈಎಸ್ಪಿ ಎ. ಸತೀಶ್ ಕುಮಾರ್ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಫೆಬ್ರವರಿ 6ರಂದು ಪ್ರಕರಣದ ಕಡತ ಗಳನ್ನು ಪರಿಶೀಲಿಸಿ ಮುಂದಿನ ಕ್ರಮಕ್ಕೆ ಮ್ಯಾಜಿಸ್ಟ್ರೇಟ್’ರಿಗೆ ಹಸ್ತಾಂತರಿಸಲಾಗಿತ್ತು.
ಪ್ರಕರಣದಲ್ಲಿ ಸುರೇಂದ್ರನ್ ಪ್ರಥಮ ಆರೋಪಿಯಾಗಿದ್ದು,ಯುವ ಮೋರ್ಚಾ ಮುಖಂಡ ಸುನಿಲ್ ನಾಯ್ಕ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಾಲಕೃಷ್ಣ ಶೆಟ್ಟಿ,ಮುಖಂಡರಾದ ಸುರೇಶ್ ನಾಯ್ಕ್,, ಕೆ. ಮಣಿಕಂಠ ರೈ, ಲೋಕೇಶ್ ನೊಂಡಾ ಉಳಿದ ಆರೋಪಿಗಳಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರ ಕ್ಷೇತ್ರದಲ್ಲಿ ಬಿ ಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರ ರವರನ್ನು ಕಣದಿಂದ ಹಿಂದಕ್ಕೆ ಸರಿಸಲು ನಾಮಪತ್ರ ಹಿಂಪಡೆಯಲು ಬೆದರಿಸಿ ಬಳಿಕ ಎರಡು ಲಕ್ಷ ರೂ. ನಗದು , ಸ್ಮಾರ್ಟ್ ಫೋನ್ ನೀಡಿ ದ ಬಗ್ಗೆ ಪ್ರಕರಣ ದಾಖಲಿಸಲಾಗಿತ್ತು.
ಚುನಾವಣೆಯ ಬಳಿಕ ಕೆ.ಸುಂದರ ರವರು ಈ ಬಗ್ಗೆ ಬಹಿರಂಗ ಪಡಿಸಿದ್ದರು. ಈ ಬಗ್ಗೆ ಎಲ್ ಡಿ ಎಫ್ ಅಭ್ಯರ್ಥಿ ಯಾಗಿದ್ದ ವಿ. ವಿ ರಮೇಶ ನ್ ಪೊಲೀಸರಿಗೆ ದೂರು ನೀಡಿದ್ದರು.ಬಳಿಕ ನ್ಯಾಯಾಲಯದ ಆದೇಶದಂತೆ ಪ್ರಕರಣವನ್ನು ಕ್ರೈಂ ಬ್ರಾಂಚ್ ಗೆ ಒಪ್ಪಿಸಲಾಗಿತ್ತು