ಮಂಗಳೂರು, ಮಾ 14 (DaijiworldNews/MS): ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ವಾಸನೆಯುಕ್ತ ಹೊಗೆ ಆವರಿಸಿ ಸ್ಥಳೀಯರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಸ್ಥಳಕ್ಕೆ ಬಂದ ಕೆಐಒಸಿಎಲ್, ಎಸ್ಇಜೆಡ್, ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ಠಾಣೆಗಳ ಐದು ಅಗ್ನಿಶಾಮಕ ವಾಹನಗಳ ಮೂಲಕ ಬೆಂಕಿ ನಂದಿಸಲು ಕಾರ್ಯದಲ್ಲಿ ತೊಡಗಿದೆ. ದಿನವಡೀ ಕಾರ್ಯಾಚರಣೆಯಲ್ಲಿ ನಡೆದಿದ್ದು, ಹೊಗೆ ನಿಂತಿಲ್ಲ. ಅಲ್ಲದೆ ಸ್ಥಳದಲ್ಲಿ ನಿಲ್ಲಿಸಿದ್ದ ಹಿಟಾಚಿಯೊಂದು ಬೆಂಕಿಗೆ ಆಹುತಿಯಾಗಿದೆ.
2023ರ ಜ.6ರಂದೂ ಪಚ್ಚನಾಡಿ ಕಸದ ರಾಶಿಗೆ ಬೆಂಕಿ ಬಿದ್ದಿದ್ದು, ನಂದಿಸಲು 10 ದಿನಗಳಿಗೂ ಹೆಚ್ಚು ಸಮಯ ತಗುಲಿತ್ತು. ಫೆ. 5ರಂದು ಹಾಗೂ ಫೆ 15ರಂದು ಈ ಪ್ರದೇಶದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿತ್ತು.
ಸ್ಥಳಕ್ಕೆ ಮೇಯರ್ ಜಯಾನಂದ ಅಂಚನ್ , ಆಯುಕ್ತ ಚನ್ನಬಸಪ್ಪ ಭೇಟಿ ಪರಿಶೀಲಿಸಿದರು.