ಕಾಸರಗೋಡು, ಮಾ. 13 (DaijiworldNews/SM): ಹತ್ತು ವರ್ಷದ ಬಾಲಕ ಬಾವಿಯಲ್ಲಿ ಮೃತ ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪನತ್ತಡಿ ಸಮೀಪದ ಚಾಮುಂಡಿ ಕುನ್ನು ಎಂಬಲ್ಲಿ ರವಿವಾರ ರಾತ್ರಿ ನಡೆದಿದೆ.
ಚಾಮುಂಡಿಕುನ್ನುವಿನ ಪ್ರಭಾಕರ ರವರ ಪುತ್ರ ಅರ್ಜುನ್ (10) ಮೃತ ಪಟ್ಟ ವನು. ಪನತ್ತಡಿ ಸರಕಾರಿ ಶಾಲೆಯ ಐದನೇ ತರಗತಿ ವಿದ್ಯಾರ್ಥಿ ಯಾಗಿದ್ದನು. ರಾತ್ರಿ ದಿಡೀರನೆ ನಾಪತ್ತೆ ಯಾಗಿದ್ದ ಬಾಲಕನನ್ನು ಮನೆಯವರು ಹಾಗೂ ಪರಿಸರ ವಾಸಿಗಳು ಶೋಧ ನಡೆಸಿದಾಗ ಆವರಣ ಇಲ್ಲದ ಬಾವಿಯಲ್ಲಿ ಬಿದ್ದಿರುವುದು ಕಂಡು ಬಂದಿದ್ದು, ಕೂಡಲೇ ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸಿದರೂ ಆಗಲೇ ಮೃತ ಪಟ್ಟಿದ್ದನು.