ಬಂಟ್ವಾಳ, ಮಾ. 13 (DaijiworldNews/SM): ವಿದ್ಯುತ್ ಪರಿವರ್ತಕವೊಂದು ಸ್ಪೋಟಗೊಂಡು ಬೆಂಕಿ ಹತ್ತಿ ಉರಿಯುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ಮಂಜಲ್ಪಪಾದೆ ಪಲ್ಲ ಎಂಬಲ್ಲಿರುವ ಮೆಸ್ಕಾಂ ಟ್ರಾನ್ಸ್ ಪರ್ ಪೆಟ್ಟಿಗೆ ಸ್ಪೋಟಗೊಂಡಿದ್ದಲ್ಲದೆ, ಬೆಂಕಿ ಕಾಣಿಸಿಕೊಂಡು , ಆತಂಕ ಸೃಷ್ಟಿಯಾಗಿತ್ತು.
ಕೆಲದಿನಗಳಿಂದ ಈ ವಿದ್ಯುತ್ ಪರಿವರ್ತಕದಲ್ಲಿ ಆಯಿಲ್ ಸೋರಿಕೆಯಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದು, ಮಾ.12 ರಂದು 7.30 ರವೇಳೆ ದೊಡ್ಡ ಶಬ್ದದೊಂದಿಗೆ ಸ್ಪೋಟವಾಗಿದೆ.
ಬಳಿಕ ಇದರಲ್ಲಿ ಬೆಂಕಿ ಕಾಣಿಸಿಕೊಂಡು ಉರಿಯುವ ವೇಳೆ ಸ್ಥಳೀಯರು ಅಪಾಯ ಅರಿತು ನೀರು ಹಾಗೂ ಮರಳು ಹಾಕಿ ಬೆಂಕಿಯನ್ನು ಆರಿಸಲು ಪ್ರಯತ್ನಿಸಿದ್ದಾರೆ. ಬಳಿಕ ಮೆಸ್ಕಾಂ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಟ್ರಾನ್ಸ್ ಫಾರ್ಮರ್ ನ ದುರಸ್ತಿ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ನಿನ್ನೆಯಿಂದ ಈ ಭಾಗದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ದುರಸ್ತಿ ಕಾರ್ಯ ಮುಗಿದ ಬಳಿಕ ವಿದ್ಯುತ್ ಪೂರೈಕೆಯ ಭರವಸೆ ನೀಡಿದ್ದಾರೆ. ಸ್ಥಳೀಯರು ಬೆಂಕಿಯನ್ನು ನೀಡಿ ಕೂಡಲೇ ಕಾರ್ಯಪ್ತವೃತ್ತರಾದ ಹಿನ್ನೆಲೆಯಲ್ಲಿ ಬೆಂಕಿ ಗುಡ್ಡಕ್ಕೆ ಹತ್ತಿಕೊಳ್ಳುವುದನ್ನು ತಪ್ಪಿಸಿದ್ದಾರೆ.