ಕಾರ್ಕಳ, ಮಾ 12 (DijiworldNews/HR): ಪ್ರಕರಣವೊಂದರ ವಿಚಾರಣೆಯಲ್ಲಿ ಅಪರಾಧಿ ಎಂದು ನ್ಯಾಯಾಲಯ ಘೋಷಿಸಿ ತೀರ್ಪು ನೀಡಿ ಏಳು ವರ್ಷ ಕಳೆದರೂ, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಅಪರಾಧಿಯನ್ನು ಹೆಬ್ರಿ ಪೊಲೀಸರು ಬಂಧಿಸುವಲ್ಲಿ ಯಶಸ್ಸು ಆಗಿದ್ದಾರೆ.
ಪ್ರಕಾಶ್ ಅಲಿಯಾಸ್ ಪಕೀರಪ್ಪ ಆರೋಪಿಯಾಗಿದ್ದು, ಈತನ ವಿರುದ್ಧ ಕಾರ್ಕಳ 2ನೇ ಎಸಿಜೆ ಮತ್ತು ಜೆಎಂ ಎಫ್ ಸಿ ನ್ಯಾಯಾಲಯದಲ್ಲಿ 2010ರಲ್ಲಿ ದೋಷಾರೋಪಣ ದಾಖಲಾಗಿತ್ತು.
ಪ್ರಕರಣದಲ್ಲಿ ನ್ಯಾಯಾಲಯವು ಆರೋಪಿಯ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಒಂದು ವರ್ಷದ ಶಿಕ್ಷೆಯ ತೀರ್ಪು ನೀಡಿದೆ.
ಇನ್ನು 7 ವರ್ಷಗಳಿಂದ ತಲೆಮರೆಸಿಕೊಂಡ ಪ್ರಕಾಶ ಅಲಯಾಸ್ ಪಕೀರಪ್ಪ ಎಂಬಾತನನ್ನು ಹೆಬ್ರಿ ಪೋಲಿಸ್ ಠಾಣಾ ಪೋಲೀಸ್ ಉಪನೀಕ್ಷಕರಾದ ನಂದಕುಮಾರ ಎಂ.ಎಂ ಮತ್ತು ನಿರಂಜನ್ ಹೆಗಡೆ ಯವರ ಮಾರ್ಗದರ್ಶನದಲ್ಲಿ ಠಾಣಾ ಕ್ರೈಂ ಸಿಬ್ಬಂದಿ ರಾಜ್ ಕುಮಾರ್ ಮತ್ತು ವಾರೆಂಟ್ ಸಿಬ್ಬಂದಿ ಸುರೇಶ್ ಕುಮಾರ್ ಹಾಗೂ ಭರತ ರವರು ಕೊಪ್ಪಳ ಜಿಲ್ಲೆಯ ಮಾದನೂರಿನಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿದಿಸಿದೆ.