ಬಂಟ್ವಾಳ, ಮಾ 19 (MSP): ಲೋಕಸಭಾ ಚುನಾವಣೆಯ ಮುಂಜಾಗ್ರತಾ ಕ್ರಮವಾಗಿ ಬಂಟ್ವಾಳ ತಾಲೂಕಿನ ವಿವಿಧೆಡೆ ಸುರಕ್ಷಾ ಸೀಮಾ ಬಲ್ ಪಡೆಯ ಯೋಧರಿಂದ ಬಂಟ್ವಾಳ ಪೊಲೀಸರ ಸಹಕಾರದೊಂದಿಗೆ ರೂಟ್ ಮಾರ್ಚ್ ಮಾ.19ರ ಸೋಮವಾರ ನಡೆಯಿತು.
ವಿಟ್ಲ ಟೌನ್ನಿಂದ ರೂಟ್ ಮಾರ್ಚ್ ಹೊರಟು, ಕನ್ಯಾನ, ಕರೋಪಾಡಿ, ಸಾಲೆತ್ತೂರು ಸಾಗಿತು. ಬಳಿಕ ಫರಂಗಿಪೇಟೆಯಲ್ಲಿ ರೂಟ್ ಮಾರ್ಚ್ ನಡೆಯಿತು. ಚುನಾವಣಾ ಪೂರ್ವ ಯಾವುದೇ ಅಹಿತಕರ ಘಟನೆ ನಡೆಯದಂತೆ ಹಾಗೂ ಮತದಾನದವರೆಗೂ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಈ ಮಾರ್ಚ್ ಹಮ್ಮಿಕೊಳ್ಳಲಾಗಿದೆ.
ಸುರಕ್ಷಾ ಸೀಮಾ ಬಲದ ಕಮಾಂಡೆಡ್, ಬಂಟ್ವಾಳ ಎಎಸ್ಪಿ ಸೈದುಲು ಅಡಾವತ್, ವೃತ್ತ ನಿರೀಕ್ಷಕ ಶರನ್ ಗೌಡ, ಬಂಟ್ವಾಳದ ಎಸ್ಸೈ, ಬಂಟ್ವಾಳ ಸರ್ಕಲ್ನ ಎಲ್ಲ ಪೊಲೀಸ್ ಸಿಬ್ಬಂದಿ, ಸುರಕ್ಷಾ ಸೀಮಾ ಬಲದ ಸಿಬ್ಬಂದಿ, ಪೊಲೀಸ್ ವಾಹನಗಳು ಫಥಸಂಚಲನದಲ್ಲಿ ಭಾಗವಹಿಸಿದ್ದವು.