ಕಾಸರಗೋಡು, ಮಾ 11 (DaijiworldNews/HR): ಕಿಯೂರುನಲ್ಲಿ ಸಮುದ್ರ ಪಾಲಾಗಿದ್ದ ಮಧ್ಯ ಪ್ರದೇಶ ಮೂಲದ ಕಾರ್ಮಿಕ ನ ಮೃತ ದೇಹ ಶನಿವಾರ ಪತ್ತೆಯಾಗಿದೆ.
ಮಧ್ಯಪ್ರದೇಶ ದ ಅಜಯ್ ರಾಥೋಡ್ (26) ಮೃತ ಪಟ್ಟವರು.
ಮಾರ್ಬಲ್ ಕಾರ್ಮಿಕನಾಗಿದ್ದ ಅಜಯ್ ರಾಥೋಡ್ ಬುಧವಾರ ಸಂಜೆ ಕಿಯೂರಿನ ನಲ್ಲಿ ಸ್ನಾನಕ್ಕಿಳಿ ದ ಸಂದರ್ಭದಲ್ಲಿ ಸಮುದ್ರ ಪಾಲಾಗಿದ್ದರು. ಜೊತೆಯಲ್ಲಿದ್ದ ನಾಲ್ವರು ಪಾರಾಗಿದ್ದರು. ಅಗ್ನಿ ಶಾಮಕ ದಳ, ಕರಾವಳಿ ಪೊಲೀಸ್ ಪಡೆ, ಮೀನುಗಾರರು, ನಾಗರಿಕರು ಶೋಧ ನಡೆಸಿದ್ದರು. ಈ ನಡುವೆ ಚೆಂಬರಿಕ ಕಡಲ ಕಿನಾರೆಯಲ್ಲಿ ಶನಿವಾರ ಮೃತ ದೇಹ ಪತ್ತೆಯಾಗಿದೆ.
ಮೇಲ್ಪರಂಬ ಪೊಲೀಸರು ಮಹಜರು ನಡೆಸಿದ್ದು, ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಕರಿಗೆ ಬಿಟ್ಟು ಕೊಡಲಾಗುವುದು. ಅಜಯ್ ಕುಟುಂಬ ಸಹಿತ ಬೇಕಲ ಕಟ್ಟೆ ಕಾಲ್ ನಲ್ಲಿ ಹಲವು ವರ್ಷ ಗಳಿಂದ ವಾಸವಾಗಿದ್ದರು.