ಸುಬ್ರಹ್ಮಣ್ಯ, ಮಾ 11 (DaijiworldNews/MS): ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸನ್ನು ಓವರ್ ಟೇಕ್ ಮಾಡಿ ಮುಂದೆ ಚಲಿಸುತ್ತಿದ್ದಾಗ ಸ್ಕಿಡ್ ಆಗಿಬಿದ್ದ ಪರಿಣಾಮ ಬೈಕ್ ಸವಾರ ಮೃತಪಟ್ಟು ಸಹ ಸವಾರ ಗಾಯಗೊಂಡ ಘಟನೆ ಮಾರ್ಚ್ 10ರಂದು ರಾತ್ರಿ ಸುಬ್ರಹ್ಮಣ್ಯ ಹಿಂಜಾಡಿ ಬಳಿ ನಡೆದಿದೆ.
ಘಟನೆಯಲ್ಲಿ ಮೃತ ವ್ಯಕ್ತಿಯನ್ನು ಸುಬ್ರಹ್ಮಣ್ಯದ ಕಲ್ಲಗುಡ್ಡೆ ನಿವಾಸಿ ರಮೇಶ್ (27) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ರಮೇಶ್ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಹಾದಿಮದ್ಯೆ ಮೃತಪಟ್ಟಿದ್ದಾರೆ. ಮತ್ತೊಬ್ಬ ಗಾಯಾಳು ಸಣ್ಣಪುಟ್ಟ ಗಾಯದೊಂದಿಗೆ ಬಾರಾಗಿರುವುದಾಗಿ ತಿಳಿದು ಬಂದಿದೆ.