ಕಾಸರಗೋಡು, ಮಾ 10 (DaijiworldNews/SM): ಕರ್ತವ್ಯ ಲೋಪದ ಎಸಗಿದ್ದ ಕಾಸರಗೋಡು ಕ್ರೈಂ ಬ್ರಾಂಚ್ ಇನ್ಸ್.ಪೆಕ್ಟರ್ ಆರ್. ಶಿವಶಂಕರ್ ನನ್ನು ಸೇವೆಯಿಂದ ಅಮಾನತು ಗೊ ಳಿಸಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅನಿಲ್ ಕಾಂತ್ ಆದೇಶ ಹೊರಡಿಸಿದ್ದಾರೆ.
ದೂರು ನೀಡಲು ಬಂದಿದ್ದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಂತೆ ಈ ಕ್ರಮ ತೆಗೆದು ಕೊಳ್ಳಲಾಗಿದೆ. ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಕಾರಣ ಕೇಳಿ ನೋಟಿಸ್ ನೀಡಿದ್ದರು. ಆದರೆ ಶಿವಶಂಕರ್ ನೀಡಿದ ಉತ್ತರ ತೃಪ್ತಿ ಕರ ಇಲ್ಲದ ಕಾರಣ ಸೇವೆಯಿಂದ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.
ಈ ಹಿಂದೆ ಹಲವು ಬಾರಿ ಕರ್ತವ್ಯ ಲೋಪ ಎಸಗಿದ ಕಾರಣಕ್ಕಾಗಿ ಶೋಕಾಸ್ ನೋಟೀಸ್ ನೀಡಲಾಗಿತ್ತು. ಆದರೆ ಮತ್ತೆ ಲೋಪ ಎಸಗಿರುವ ಬಗ್ಗೆ ಲಭಿಸಿದ ದೂರಿನಂತೆ ಕ್ರಮ ತೆಗೆದುಕೊಳ್ಳಲಾಗಿದೆ. 2006 ರಿಂದ ಹಲವು ಬಾರಿ ಶಿಸ್ತು ಕ್ರಮಕ್ಕೆ ಒಳಗಾಗಿದ್ದು, ನಾಲ್ಕು ಬಾರಿ ಅಮಾನತು ಶಿಕ್ಷೆ ಗೊಳಗಾಗಿ ದ್ದರು. ಅಕ್ರಮ ಸಂಪತ್ತು, ಮಾನಭಂಗ, ಅಮಾಯಕರ ಮೇಲೆ ಮೊಕದ್ದಮೆ ದಾಖಲು ಹೀಗೆ ಹಲವು ದೂರುಗಳು ಈತನ ಮೇಲಿದೆ. ಈ ಎಲ್ಲಾ ಅಂಶಗಳನ್ನು ಗಮನ ದಲ್ಲಿಟ್ಟು ಕೊಂಡು ಸೇವೆಯಿಂದ ಅಮಾನತು ಗೊಳಿಸಿ ಆದೇಶ ಹೊರಡಿಸಲಾಗಿದೆ.