ಪಡುಬಿದ್ರೆ, ಮಾ 10 (DaijiworldNews/HR): ಪಡುಬಿದ್ರೆಯ ನಂದಿಕೂರು ವಿನಿಂದ ಮುಂದೆಸಾಗಿ ಕೆಲ್ಲಾರು ಪಲಿಮಾರುವಿನ ಅಸ್ತಪಡ್ವೆ ಎಂಬಲ್ಲಿ ಆಟದ ಮೈದಾನದ ಬಳಿ ಆಲದ ಮರದ ಕೆಳಗಡೆ ಎರಡು ಬೃಹತ್ ಗಾತ್ರದ ವೀರಗಲ್ಲು ಪತ್ತೆಯಾಗಿದೆ.
ಒಂದು ವೀರಗಲ್ಲು ಸುಮಾರು ಏಳುಫೀಟು ಮತ್ತೊಂದು ಎಂಟು ಫೀಟು ಎತ್ತರವಿದ್ದು ಎರಡು ಫೀಟು ಆಗಲವಿದೆ. ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆಯ ಉಬ್ಬಿಕೊಂಡ ಚಿತ್ರಗಳು ಈ ವೀರಗಲ್ಲುವಿನಲ್ಲಿ ಕಾಣಸಿಗುತ್ತದೆ.
ತಲೆಬಾಗದಲ್ಲಿ ಸೂರ್ಯ ಚಂದ್ರ, ಕತ್ತಿ ಗುರಾಣಿ, ಸೂಡಿ ಹಾಕಿದಂತೆ ತಲೆಯ ಭಾಗ. ವೀರರು ಬಳಸುವಂತಹ ಮೈ ಹೊದಿಕೆಯ ಬಟ್ಟೆ ಹೊಂದಿರುತ್ತದೆ. ಬಲಕಾಲು ಮುಂದೆ ನಿಂತು ಗುರಾಣಿ ಕತ್ತಿ ಹಿಡಿದು ಯುದ್ಧಕ್ಕೆ ಆಹ್ವಾನಿಸಿದಂತಿದೆ. ಪುರುಷನ ಚಿತ್ರ ಇರುವ ಶಾಸನ ದಲ್ಲಿ ಬಾಲದಂತಿದೆ. ಈ ಭಾಗದ ಜನರು ಇದನ್ನು ಕೋಟಿ ಚೆನ್ನಯರು ಅನ್ನುತ್ತಾರೆ. ಅನತಿ ದೂರದಲ್ಲಿ ದೈವರಾಜ ಕೊಡ್ದಬ್ಬುವಿನ ಸನ್ನಿಧಾನವಿದೆ. ಪ್ರಮುಖ ರಸ್ತೆಯಲ್ಲಿ ಕೋಟಿ ಚೆನ್ನಯರ ಗರಡಿಯೂ ಇದೆ. ಈ ಶಾಸನಗಳು ಸರಕಾರಿ ಜಾಗದಲ್ಲಿ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇನ್ನು ಗೋಳಿಮರದ (ಆಲದಮರ) ಕೆಳಗಡೆ ನಿರ್ಜನ ಪ್ರದೇಶವಾದ್ದರಿಂದ ಯಾರು ಇದರ ಕಡೆಗೆಹೋಗುವುದಿಲ್ಲ ಈಗಾಗಲೇ ಬೇಲಿ ಹಾಕಿದ್ದು. ಸ್ವಚ್ಛತೆ ಕಾಣುವುದಿಲ್ಲ. ಉಡುಪಿ ನಿಟ್ಟೂರಿನ ನಿವಾಸಿ ರಾಜೇಶ್ ಅವರಮಾಹಿತಿ ಮೇರೆಗೆ ಗಣೇಶ್ ರಾಜ್ ಸರಳೇಬೆಟ್ಟು ಹಾಗೂ ಜಯಶೆಟ್ಟಿಬನ್ನಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಈ ಸಂದರ್ಭದಲ್ಲಿ ಸ್ಥಳೀಯರಾದ ಕೇಶವ ಶೆಟ್ಟಿ ಭಾಸ್ಕರ, ಪ್ರಕಾಶ, ರಮೇಶ, ರಾಘವೇಂದ್ರ ಸತೀಶ್ ಮುಖಾರಿ ವಿಠಲ ಮೇಸ್ತ್ರಿ ಜೊತೆಗಿದ್ದು ಮಾಹಿತಿ ನೀಡಿ ಸಹಕರಿಸಿದರು.