ಬಂಟ್ವಾಳ, ಮಾ. 07 (DaijiworldNews/SM): ಮನೆಯ ಬೀಗ ತೆಗೆದು ಲಕ್ಷಾಂತರ ರೂ ಮೌಲ್ಯದ ನಗನಗದು ಕಳವು ಮಾಡಿದ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಇರಾದಲ್ಲಿ ನಡೆದಿದೆ.
ಒಟ್ಟು 3,11,550 ರೂ. ಮೌಲ್ಯದ ಚಿನ್ನಾಭರಣ ಕಳವುವಾಗಿದ್ದು, ಸಣ್ಣ ಪ್ಲಾಸಿಕ್ ಬಾಕ್ಸ್ನಲ್ಲಿ ಇಟ್ಟಿದ್ದ ಕಿವಿಯ ಬೆಂಡೋಳೆ ಅಂದಾಜು 10 ಗ್ರಾಂ, 3 ಉಂಗುರಗಳು ಅಂದಾಜು ತೂಕ 8 ಗ್ರಾಂ, ಹವಳದ ಸರ ಅಂದಾಜು ತೂಕ 20 ಗ್ರಾಂ ಹಾಗೂ ಅದರ ಪಕ್ಕದಲ್ಲಿ ಇಟ್ಟಿದ್ದ ಕರಿಮಣಿ ಸರ, ಅಂದಾಜು ತೂಕ 35 ಗ್ರಾಂ, 2 ಕೈಬಳೆಗಳು ಅಂದಾಜು ತೂಕ 20ಗ್ರಾಂ, ಇವುಗಳು ಕಳವಾಗಿದೆ.
ಇವುಗಳ ಒಟ್ಟು ತೂಕ 93 ಗ್ರಾಂ ಆಗಿದೆ. ಮನೆಯಲ್ಲಿ ಯಾರು ಇಲ್ಲದ ವೇಳೆ ಹಗಲು ಹೊತ್ತಿನಲ್ಲಿ ಮನೆಯಿಂದ ಮಾಡಿದ್ದಾರೆ ಎಂದು ಗ್ರಾಮಾಂತರ ಪೋಲೀಸ್ ಠಾಣೆಗೆ ಮನೆಯ ಮಾಲಕಿ ರೋಹಿಣಿ ದೂರು ನೀಡಿದ್ದಾರೆ.
ರೋಹಿಣಿ ಹಾಗೂ ಅವರ ಗಂಡ ಇಬ್ಬರು ಮನೆಗೆ ಬೀಗ ಹಾಕಿ ಕೂಲಿ ಕೆಲಸಕ್ಕೆ ಹೋಗುತ್ತಾರೆ. ಅದೇ ರೀತಿ ಮಾ.7.ರಂದು ಮನೆಯಿಂದ ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದರು. ಕೆಲಸಕ್ಕೆ ಹೋಗುವ ವೇಳೆ ಮನೆಗೆ ಬೀಗ ಹಾಕಿ ಬೀಗದ ಕೀಯನ್ನು ಬಚ್ಚಲು ಕೋಣೆಯಲ್ಲಿ ಇರಿಸಿ ಹೋಗುತ್ತಿದ್ದರು. ನಿನ್ನೆಯೂ ಅದೇ ರೀತಿ ಬೀಗದ ಕೀಯನ್ನು ಬಚ್ಚಲು ಮನೆಯ ಕಿಟಕಿ ಯಲ್ಲಿಟ್ಟು ತೆರಳಿದ್ದರು.
ಸಂಜೆ ಗಂಡ ಹೆಂಡತಿ ಕೆಲಸ ಮುಗಿಸಿ ಮನೆಗೆ ಬಂದು ನೋಡುವಾಗ ಮನೆಗೆ ಬೀಗ ಹಾಕಿತ್ತು.ಬೀಗ ತೆಗೆದು ಮಬೆಯಯ ಒಳಗೆ ಹೋದಾಗ ಕೋಣೆಯಲ್ಲಿ ದ್ದ ಗೊದ್ರೆಜ್ ನಿಂದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಕೆಳಗೆ ಬಿದ್ದಿತ್ತು.
ಗೊದ್ರೆಜ್ ಓಪನ್ ಮಾಡಿ ನೋಡಿದಾಗ ಅದರೊಳಗಿದ್ದ ಚಿನ್ನಾಭರಣಗಳು ಕಳವುವಾಗಿರುವುದು ಗಮನಕ್ಕೆ ಬಂದಿದೆ.
ಸ್ಥಳಕ್ಕೆ ಗ್ರಾಮಾಂತರ ಎಸ್.ಐ.ಉದಯ ರವಿ ಬೇಟಿ ನೀಡಿದ್ದಾರೆ.