ಉಳ್ಳಾಲ, ಮಾ 08 (DaijiworldNews/SM): ಉಳ್ಳಾಲ ದರ್ಗಾ ಸಮಿತಿ ಆಡಳಿತ ಹಸ್ತಾಂತರ ದರ್ಗಾ ಅಧ್ಯಕ್ಷ ರ ಅನುಪಸ್ಥಿತಿಯಲ್ಲಿ ಬುಧವಾರ ನಡೆಯಿತು. ಜಿಲ್ಲಾ ವಕ್ಫ್ ಅಧಿಕಾರಿ ಸೆಯ್ಯದ್ ಮೊಹಝ್ಝಂ ಪಾಶ, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅಧಿಕಾರ ಹಸ್ತಾಂತರ ಮಾಡುವಂತೆ ಕೋಶಾಧಿಕಾರಿ ಯು.ಕೆ. ಇಲ್ಯಾಸ್ ಸಹಿತ ಸಮಿತಿ ಸದಸ್ಯ ರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಕೆಲವು ಗೊಂದಲ ವಾತಾವರಣ ನಿರ್ಮಾಣವಾಯಿತು.ಈ ವೇಳೆ ದರ್ಗಾ ಕೋಶಾಧಿಕಾರಿ ಯು ಕೆ ಇಲ್ಯಾಸ್ ಮಾತನಾಡಿ, ಈಗ ಹಸ್ತಾಂತರ ಮಾಡುವುದಿಲ್ಲ.ಲೆಕ್ಕಪತ್ರ ಹಸ್ತಾಂತರ ಮಾಡಲು ನೋಟೀಸ್ ನೀಡಿ ಒಂದು ತಿಂಗಳು ಕಾಲಾವಕಾಶ ಕೊಡುವಂತೆ ಕೋರಿದರು. ಅಲ್ಲದೆ ವಕ್ಫ್ ಬೋರ್ಡ್ ಬೈಲಾ ನೀಡಲಿಲ್ಲ ಎಂದು ಅವರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ವಕ್ಫ್ ಅಧಿಕಾರಿ ಕಾನೂನು 68 ರ ಪ್ರಕಾರ ಲೆಕ್ಕ ಪತ್ರ, ಡಾಕ್ಯುಮೆಂಟ್ ಹಸ್ತಾಂತರ ಮಾಡಲು ಒಂದು ತಿಂಗಳು ಕಾಲಾವಕಾಶ ಇದೆ. ಗೆದ್ದು ಬಂದವರು ಇನ್ನೂ ಅಧಿಕಾರದಲ್ಲಿ ಇರುತ್ತಾರೆ. ಹೊಸ ಸಮಿತಿ ದರ್ಗಾದ ಹಳೇ ಲೆಕ್ಕ ಕೇಳುವುದು ಬೇಡ.ಹೊಸದಾಗಿ ಆಡಳಿತ ನಡೆಸಬೇಕು ಎಂದು ಹೇಳಿದರು.
ಇಂದಿನಿಂದ ಹೊಸ ಸಮಿತಿ ಕಾರ್ಯ ಚಟುವಟಿಕೆ ನಡೆಸಲಿದ್ದಾರೆ. ನೂತನ ಸಮಿತಿ ಇಂದಿನಿಂದ ಕಾರ್ಯಾಚರಿಸಲಿದೆ. ಈವರೆಗೆ ಆಡಳಿತ ದಲ್ಲಿದ್ದ ಸಮಿತಿ ಗೆ ಇನ್ನು ಅಧಿಕಾರ ಇರುವುದಿಲ್ಲ ಎಂದು ಹೇಳಿ ವಕ್ಫ್ ಬೋರ್ಡ್ ಹೊಸ ಸದಸ್ಯರಿಗೆ ಅಧಿಕಾರ ಹಸ್ತಾಂತರ ಮಾಡಿತು.
ಅಧ್ಯಕ್ಷ ರಾಗಿ ಅಧಿಕಾರ ಪಡೆದ ಹನೀಫ್ ಹಾಜಿ ಅವರು ಅಧಿಕಾರ ಸ್ವೀಕರಿಸಿದ ನಂತರ ಮಾತನಾಡಿ, ಇಂದು ಐದು ಗಂಟೆಯ ಬಳಿಕ ಉಳ್ಳಾಲ ದರ್ಗಾ ದ ಅಧಿಕಾರ ನಮ್ಮ ಕೈಯಲ್ಲಿ ಇದೆ. ಲೆಕ್ಕ ಪತ್ರ ಡಾಕ್ಯುಮೆಂಟ್ ಕೊಡಲು ಈವರೆಗೆ ಆಡಳಿತ ದಲ್ಲಿದ್ದವರಿಗೆ ಒಂದು ತಿಂಗಳ ಕಾಲಾವಕಾಶ ಇದೆ.ಅಧ್ಯಕ್ಷ ಕಚೇರಿಯ ಬೀಗ ಅವರು ನೀಡಬಹುದು.ಏನಾದರು ತೊಂದರೆ ಆದರೆ ಅಧಿಕಾರಿಗಳ ಗಮನ ಸೆಳೆಯಬೇಕು. ನಾವು ಸೇವಕರಾಗಿ ಆರಿಸಿ ಬಂದಿದ್ದೇವೆ. ಇದಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಉಪಾಧ್ಯಕ್ಷ ರಾಗಿ ಅಶ್ರಫ್ ರೈಟ್ ವೆ, ಪ್ರಧಾನ ಕಾರ್ಯದರ್ಶಿ ಯಾಗಿ ಶಿಹಾಬುದ್ದೀನ್ ಸಖಾಫಿ, ಕೋಶಾಧಿಕಾರಿ ಯಾಗಿ ನಾಝಿಂ ಕೋಟೆಪುರ ಅಧಿಕಾರ ಪಡೆದ ಬಳಿಕ ನೂತನ ಸಮಿತಿ ಸದಸ್ಯರು ದರ್ಗಾ ಝಿಯಾರತ್ ಮಾಡಿ ಸಂತೋಷ ಹಂಚಿಕೊಂಡರು.