ಬಂಟ್ವಾಳ, ಮಾ 18(SM): ಬಿಸಿಲಿನ ಬೇಗೆ ಹೆಚ್ಚುತ್ತಿದ್ದು ನೇತ್ರಾವತಿ ನದಿಯ ತುಂಬೆ ಮತ್ತು ಶಂಭೂರು ಎಎಂಆರ್ ಡ್ಯಾಂನಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಇಂಚಿಂಚೂ ಕುಸಿಯುತ್ತಿದೆ. ವಾರದ ಹಿಂದೆ 5.6 ಮೀಟರ್ನಲ್ಲಿದ್ದ ತುಂಬೆ ಡ್ಯಾಂ ನೀರಿನ ಮಟ್ಟ, ಮಾ. 18ರಂದು 5 ಮೀಟರ್ಗೆ ಕುಸಿದಿದೆ.
ಶಂಭೂರು ಡ್ಯಾಂನಲ್ಲಿ ಸಮುದ್ರ ಮಟ್ಟದಿಂದ 5.8 ಮೀಟರ್ ನೀರು ದಾಸ್ತಾನು ಹೊಂದಿದೆ. ಒಂದು ಅಂದಾಜು ಪ್ರಕಾರ ತುಂಬೆ ಡ್ಯಾಂ ಕುಡಿಯುವ ನೀರಿನ ಸಂಗ್ರಹ ಮುಂದಿನ 40 ದಿನಗಳಿಗೆ ಸಾಕಾಗಬಹುದು. ಶಂಭೂರು ಎಎಂಆರ್ ಡ್ಯಾಂ ನೀರಿನಿಂದ ಮುಂದಿನ 15 ದಿನಗಳಷ್ಟು ಕಾಲ ಸುಧಾರಿಸಹುದು ಎನ್ನುವುದು ಅಧಿಕಾರಿಗಳು ತಿಳಿಸಿದ್ದಾರೆ. ಎಎಂಆರ್ ಡ್ಯಾಂನಲ್ಲಿ ತಳದ ಒಂದೂವರೆ ಮೀಟರ್ ನೀರು ಕೂಡಾ ಬಳಕೆಗೆ ದೊರೆಯುವುದಿಲ್ಲ. ಈಗಾಗಲೇ ಸುಮಾರು ಒಂದು ಮೀಟರ್ನಷ್ಟು ಹೂಳು ತುಂಬಿಕೊಂಡಿರುವ ಮಾಹಿತಿ ಇದೆ.
ಅಲ್ಲಿಯೂ 4.3 ಮೀಟರ್ ನೀರು ಬಳಕೆಗೆ ಸಿಗಲಿದೆ. ಆದರೆ ಅದನ್ನು ತುಂಬೆ ಡ್ಯಾಂಗೆ ಹರಿಸಿ ಅಲ್ಲಿಂದ ನೀರನ್ನು ಬಳಸಬೇಕು. ನೀರು ತುಂಬೆಗೆ ಹರಿದು ಅಲ್ಲಿ ದಾಸ್ತಾನಾಗಲು ಕನಿಷ್ಟ 24 ಗಂಟೆ ಅವಧಿ ಬೇಕಾಗುತ್ತದೆ. ಉರಿ ಬಿಸಿಲಿಗೆ ದಿನಕ್ಕೆ ಕನಿಷ್ಟ 1ರಿಂದ 2 ಇಂಚು ನೀರು ಆವಿಯಾಗುತ್ತದೆ. ಕಳೆದ ಎರಡು ವರ್ಷಗಳ ಹಿಂದೆ ಹೊಸ ವೆಂಟೆಡ್ ಡ್ಯಾಂ ಮೂಲಕ ಆರು ಮೀಟರ್ ಎತ್ತರಕ್ಕೆ ನೀರು ಸಂಗ್ರಹಣೆ ಮಾಡಲಾಗುತ್ತಿದ್ದು, ನೀರಿನ ಸಮಸ್ಯೆ ಎದುರಾಗದು ಎಂಬ ನಿರೀಕ್ಷೆ ಅಧಿಕಾರಿಗಳಾಗಿತ್ತು. ಇನ್ನೊಂದು ಕಡೆಯಿಂದ ಕಳೆದ ಬಾರಿ ಸಾಕಷ್ಟು ಮಳೆ ಕೂಡ ಬಂದಿತ್ತು. ಆದರೆ ಇತ್ತೀಚಿನ ಕೆಲ ದಿನಗಳಿಂದ ವಿಪರೀತ ತಾಪದಿಂದ ನೀರು ಆವಿಯಾಗುತ್ತಿದ್ದು ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ.
ಇದರ ನಡುವೆ ಮಳೆಯ ಲಕ್ಷಣ ಇರುವುದರಿಂದ ಒಂದೆರಡು ಮಳೆಯಾದರೂ ನದಿ ನೀರಿನ ಸಂಗ್ರಹದಲ್ಲಿ ಕೊರತೆ ಬಾರದು ಎನ್ನುವ ಲೆಕ್ಕಾಚಾರವಿದೆ. ಕಳೆದ ಎರಡು ವರ್ಷಗಳ ಹಿಂದೆ ಹೊಸ ವೆಂಟೆಡ್ ಡ್ಯಾಂ ಮೂಲಕ ಆರು ಮೀಟರ್ ಎತ್ತರಕ್ಕೆ ನೀರು ಸಂಗ್ರಹಣೆ ಮಾಡಲಾಗುತ್ತಿದ್ದು, ನೀರಿನ ಸಮಸ್ಯೆ ಎದುರಾಗದು ಎಂಬ ನಿರೀಕ್ಷೆ ಅಧಿಕಾರಿಗಳದ್ದಾಗಿದೆ. ಇನ್ನೊಂದೆಡೆ ಕಳೆದ ಬಾರಿ ಸಾಕಷ್ಟು ಮಳೆ ಕೂಡ ಬಂದಿತ್ತು. ಇತ್ತೀಚಿನ ಕೆಲ ದಿನಗಳಿಂದ ವಿಪರೀತ ತಾಪಮಾನದಿಂದಾಗಿ ನೀರು ಆವಿಯಾಗುತ್ತಿದ್ದು ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ.
ಕಳೆದ ಮೂರು ವರ್ಷಗಳ ಹಿಂದೆ ಇದೇ ರೀತಿ ನೀರಿನ ಭವಣೆ ಉಂಟಾಗಿ ಮಂಗಳೂರಿಗೆ ಮೂರು ದಿನಗಗಳಿಗೊಮ್ಮೆ ನೀರು ಕೊಡುವ ಮೂಲಕ ಸಮಸ್ಯೆ ಉಂಟಾಗಿತ್ತು. ಹಾಗಾಗಿ ಇಲಾಖೆ ಈ ಬಾರಿ ಮೊದಲೇ ಎಚ್ಚೆತ್ತುಕೊಂಡು ನೀರಿನ ಸಮಸ್ಯೆಯಾಗದಂತೆ ಎಚ್ಚರ ವಹಿಸಿಕೊಂಡಿದೆ.