ಕಾಸರಗೋಡು, ಮಾ. 07 (DaijiworldNews/SM): ಮೂರು ದಿನಗಳ ಹಿಂದೆ ನೀಲೇಶ್ವರ ಕೋಟ ಪ್ಪುರದಲ್ಲಿ ತಮಿಳುನಾಡು ಮೂಲದ ಕಾರ್ಮಿಕನ ನಿಗೂಢ ಸಾವು ಪ್ರಕರಣ ಕೊಲೆ ಎಂದು ಸಾಬೀತಾಗಿದ್ದು , ಕೃತ್ಯಕ್ಕೆ ಸಂಬಂಧಪಟ್ಟಂತೆ ಮೂವರನ್ನು ನೀಲೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಎರ್ನಾಕುಲಂ ಕಲಕಂಚೇರಿಯ ಕೆ .ಪಿ ಬೈಜು ( ೪೩) , ಕಲಮಶ್ಯೇರಿಯ ಮುಹಮ್ಮದ್ ಫೈಝಲ್ ( ೪೨) ನೋರ್ತ್ ಪರವೂರಿನ ಡೇನಿಯಲ್ ಬೆನ್ನಿ ( ೪೩) ಬಂಧಿತರು.
ತಮಳುನಾಡು ಮಧುರೆ ಯ ರಮೇಶ್ ( ೪೩) ಎಂಬವರ ಕೊಲೆಗೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಮಾರ್ಚ್ ನಾಲ್ಕರಂದು ರಮೇಶ್ ವಾಸ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತ್ತೆಯಾಗಿದ್ರು ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕಾಮಿಸಿ ತನಿಖೆ ನಡೆಸಿದ್ದರು .
ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ತಲೆಗೆ ಬಿದ್ದ ಬಲವಾದ ಪೆಟ್ಟು ಸಾವಿಗೆ ಕಾರಣ ಎಂದು ತಿಳಿದು ಬಂದಿತ್ತು.
ಬಾಡಿಗೆ ಮನೆಯೆಲ್ಲಿ ವಾಸವಾಗಿದ್ದ ೧೧ ಮಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ತನಿಖೆಯಿಂದ ಆರೋಪಿಗಳ ಸುಳಿವು ಲಭಿಸಿತ್ತು. ಆರೋಪಿಗಳು ಕೇಳಿದ್ದ ಹಣವನ್ನು ನೀಡ ಡಿರುವುದೇ ಕೊಲೆಗೆ ಕಾರಣ ಎನ್ನಲಾಗಿದೆ. ಕೋಟೆಪ್ಪುರ - ಕಡಿಂಞಮೂಲೆ ಸೇತುವೆ ನಿರ್ಮಾಣ ಕಾಮಗಾರಿಗೆ ರಮೇಶ್ ಹಾಗೂ ಇತರರು ಬಂದಿದ್ದರು. ರಮೇಶ್ ಹಾಗೂ ಆರೋಪಿಗಳು ಸೇರಿದಂತೆ ಒಟ್ಟು ೧೧ ಮಂದಿ ಈ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಕೊಲೆಗೆ ಬಳಸಿದ್ದ ಕಬ್ಬಿಣದ ರಾಡ್ ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪೈಕಿ ಪ್ರಥಮ ಆರೋಪಿ ಬೈಜು ವಿರುದ್ಧ ಎರ್ನಾಕುಲಂ ಜಿಲ್ಲೆಯಲ್ಲಿ 14ಕ್ಕೂ ಅಧಿಕ ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.