ಸುಳ್ಯ, ಮಾ. 06 (DaijiworldNews/SM): ಬೆಳ್ಳಾರೆ ಸರಕಾರಿ ಆಸ್ಪತ್ರೆಯ ಹಳೆ ಕಟ್ಟಡ ಕೆಡವುತ್ತಿರುವ ವೇಳೆ ಗೋಡೆ ಕುಸಿದು ಕಾರ್ಮಿಕ ಮೃತಪಟ್ಟ ಘಟನೆ ವರದಿಯಾಗಿದೆ. ಕಾರ್ಮಿಕ ಮಂಜುನಾಥ(23) ಮೃತರು.
ಬೆಳ್ಳಾರೆ ಸರಕಾರಿ ಆಸ್ಪತ್ರೆಗೆ ಹೊಸ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಹಳೆ ಕಟ್ಟಡ ಕೆಡವುವ ಕಾರ್ಯ ನಡೆಯುತ್ತಿತ್ತು. ಇದರ ಗುತ್ತಿಗೆ ತೆಗೆದುಕೊಂಡವರು ತಮ್ಮ ಕಾರ್ಮಿಕರ ಮುಖಾಂತರ ಇಂದು ಗೋಡೆ ಕೆಡವುವ ಕಾರ್ಯ ಮಾಡುತ್ತಿದ್ದರು. ಊಟದ ವಿರಾಮದ ನಂತರ ಗೋಡೆ ಕೆಡವುತ್ತಿದ್ದಾಗ ಅದು ಕಾರ್ಮಿಕ ಮಂಜುನಾಥ ಎಂಬವರ ಮೇಲೆ ಬಿದ್ದಿದೆ. ಕಲ್ಲುಗಳ ಅಡಿಗೆ ಸಿಲುಕಿದ ಅವರನ್ನು ಇತರ ಕಾರ್ಮಿಕರು ಹೊರತೆಗೆದು ಕೂಡಲೇ ಸುಳ್ಯ ಆಸ್ಪತ್ರೆಗೆ ಕೊಂಡೊಯ್ದರಾದರೂ ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದಿದ್ದರು.