ಮಂಗಳೂರು, ಮಾ 01 (DaijiworldNews/SM): ರಾಜ್ಯ ವಿಧಾನ ಸಭಾ ಚುನಾವಣಾ ಕಾವು ಜೋರಾಗಿದ್ದು, ಚುನಾವಣಾ ದಿನಾಂಕ ಘೋಷಣೆಗೂ ಮುನ್ನವೇ ಇದೀಗ ಸೋಲು ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ದಕ್ಷಿಣ ಕನ್ನಡ 8 ವಿಧಾನ ಸಭಾ ಕ್ಷೇತ್ರದಲ್ಲಿ ಸತತ ಗೆಲುವಿನ ಸರದಾರ ಮಂಗಳೂರು ಅಂದರೆ ಉಳ್ಳಾಲ ಕ್ಷೇತ್ರದ ಕಾಂಗ್ರೆಸ್ ಶಾಸಕ ಯು ಟಿ ಖಾದರ್ ಅವರನ್ನು ಕಟ್ಟಿ ಹಾಕಲು ಇತರ ಪಕ್ಷಗಳು ಸತತ ಪ್ರಯತ್ನ ನಡೆಸಿವೆ. ಈ ಬಾರಿ ಉಳ್ಳಾಲ ಕ್ಷೇತ್ರದ ಚುನಾವಣೆ ಇನ್ನಷ್ಟು ರೋಚಕವಾಗಿರಲಿದೆ. ಇದಕ್ಕೆ ಪ್ರಮುಖ ಕಾರಣ ಎಸ್ ಡಿಪಿಐ ಪಕ್ಷ ಉಳ್ಳಾಲ ಕ್ಷೇತ್ರಕ್ಕೆ ರಿಯಾಝ್ ಫರಂಗಿ ಪೇಟೆಯನ್ನು ಕಣಕ್ಕಿಳಿಸಿದೆ.
ತಾಂಟ್ರೆ ಬಾ ತಾಂಟ್ ಭಾಷಣದ ಮೂಲಕ ಪ್ರಸಿದ್ಧಿಗೆ ಬಂದಿರುವ ರಿಯಾಝ್ ಎಸ್ಡಿಪಿಐ ಪಕ್ಷದ ಜನಪ್ರಿಯ ನಾಯಕ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಚಾಕಚಕ್ಯತೆ ಉಳ್ಳವರು. ಹೀಗಾಗಿ ಯು ಟಿ ಖಾದರ್ ವಿರುದ್ಧ ಎಸ್ಡಿಪಿಐ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದ್ದು,ಈ ಬಾರಿ ಉಳ್ಳಾಲವನ್ನು ಕರಾವಳಿಯಲ್ಲಿ ತನ್ನ ಗೆಲುವಿಗೆ ಮೆಟ್ಟಲನ್ನಾಗಿ ಮಾಡಬಹುದೇ ಎನ್ನುವ ಪ್ರಶ್ನೆ ಎದುರಾಗಿದೆ.
ಇನ್ನು ಬಿಜೆಪಿ ಕೂಡಾ ಇಲ್ಲಿ ಖಾದರ್ ವಿರುದ್ಧ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಹುಡುಕಾಟ ನಡೆಸುತ್ತಿದೆ. ಆದರೆ ಅದಕ್ಕೂ ಖಾದರ್ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿ ಸಮರ್ಥ ಅಭ್ಯರ್ಥಿ ಕೊರತೆ ಕಾಡಿದೆ.
ಆದರೆ ಖಾದರ್ ಮಾತ್ರ ಯಾವುದೇ ತಲೆ ಕೆಡಿಸಿಕೊಳ್ಳದೇ ತನ್ನ ಕೆಲಸ ಕಾರ್ಯಗಳನ್ನು ಯಾವುದೇ ಜಾತಿ, ಮತ, ಧರ್ಮ ಇಲ್ಲದೇ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುತ್ತಿದ್ದಾರೆ.
ಒಟ್ಟಿನಲ್ಲಿ ಉಳ್ಳಾಲ ಕ್ಷೇತ್ರದ ಚುನಾವಣಾ ಕ್ಷೇತ್ರ ಮಾತ್ರ ಈ ಬಾರಿ ರೋಚಕವಾಗಿರಲಿದೆ.