ಕಾಸರಗೋಡು, ಮಾ 01 (DaijiworldNews/MS): ತ್ಯಾಜ್ಯ ಸಂಸ್ಕರಣೆಗೆ ನೀಡಿದ ಭರವಸೆ ಈಡೇರಿಸದ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ವೈಫಲ್ಯ ಪ್ರತಿಭಟಿಸಿ ಉಪ್ಪಳದಲ್ಲಿರುವ ಶಾಸಕರ ಕಚೇರಿಗೆ ಬಿಜೆಪಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನಾ ಜಾಥಾ ನಡೆಸಿದರು.
ಪ್ರತಿಭಟನೆಯನ್ನು ಬಿಜೆಪಿ ರಾಜ್ಯ ಅಧ್ಯಕ್ಷ ಕೆ. ಸುರೇಂದ್ರನ್ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು.ಮುಖಂಡರಾದ ಹರಿಶ್ಚಂದ್ರ ಮಂಜೇಶ್ವರ, ಬಾಲಕೃಷ್ಣ ಶೆಟ್ಟಿ, ಸತೀಶ್ಚಂದ್ರ ಭಂಡಾರಿ, ಎ.ಕೆ. ಕಯ್ಯಾ ರ್ ಆದರ್ಶ್ ಬಿ.ಎಂ, ಲೋಕೇಶ್ ನೊಂಡಾ, ಮಣಿ ಕಂಠ ರೈ, ಜಯಲಕ್ಷ್ಮಿ ಭಟ್, ಮುರಳೀಧರ ಯಾದವ್ ನೇತೃತ್ವ ನೀಡಿದರು.
ಉಪ್ಪಳ , ಮಂಜೇಶ್ವರ ವ್ಯಾಪ್ತಿಯಲ್ಲಿನ ತ್ಯಾಜ್ಯ ವಿಲೇವಾರಿ ಹಾಗೂ ಸಂಸ್ಕರಣೆಗೆ ತಾನು ಶಾಸಕ ನಾಗಿ ಆಯ್ಕೆಯಾದರೆ ಎರಡು ತಿಂಗಳೊಳಗೆ ಕ್ರಮ ತೆಗೆದುಕೊಳ್ಳುವುದಾಗಿ ಎ.ಕೆ.ಎಂ ಅಶ್ರಫ್ ನೀಡಿದ ಭರವಸೆ ಪಾಲಿಸಿಲ್ಲಎಂದು ಪ್ರತಿಭಟಿಸಿ ಪ್ರತಿಭಟನೆ ನಡೆಸಲಾಯಿತು.