ಉಡುಪಿ, ಫೆ 28 (DaijiworldNews/SM): ಬ್ರಹ್ಮಾವರ, ಬಾರ್ಕೂರೂ ಭಾಗದ ಬಹುದಿನದ ಬೇಡಿಕೆಯಾದ ಮಂಗಳೂರು ಮತ್ಯಗಂದ ಎಕ್ಸಪ್ರೆಸ್ ರೈಲಿಗೆ ಬಾರ್ಕೂರಿನಲ್ಲಿ ನಿಲುಗಡೆ ಸೇರಿದಂತೆ ಕರಾವಳಿ ಭಾಗದ ವಿವಿಧ ರೈಲ್ವೇ ನಿಲ್ದಾಣಗಳಲ್ಲಿ ರೈಲು ನಿಲುಗಡೆಯ ಬೇಡಿಕೆಗಳಿಗೆ ಕೇಂದ್ರ ರೈಲ್ವೆ ಸಚಿವರಾದ ಆಶ್ವಿನಿ ವೈಷ್ಣವ್ ಅವರು ಆದೇಶವನ್ನು ನೀಡಿದ್ದಾರೆ.
ಪ್ರಮುಖವಾಗಿ ಮಂಗಳೂರಿನಿಂದ ಮುಂಬೈ, ಮುಂಬೈನಿಂದ ಮಂಗಳೂರು ಮಾರ್ಗವಾಗಿ ಸಂಚರಿಸುವ ಮಂಗಳೂರು ಮತ್ಯಗಂದ ಎಕ್ಸಪ್ರೆಸ್ಗೆ (12619/20) ಬಾರ್ಕೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಬಗ್ಗೆ ಪ್ರಯಾಣಿಕರಿಂದ ಬೇಡಿಕೆಯಿತ್ತು. ಕರಾವಳಿ ಭಾಗದ ಪ್ರಯಾಣಿಕರಿಗೆ ಮತ್ಸಗಂದ ರೇಲ್ವೆ ಬಾರ್ಕೂರು ನಿಲುಗಡೆಗೊಳ್ಳವುದರಿಂದ ಹೆಚ್ಚಿನ ಅನುಕೂಲವಾಗಲಿದೆ. ವಿಶೇಷವಾಗಿ ಹೋಟೆಲ್ ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಈ ನಿಲುಗಡೆ ಬಹಳೇ ಉಪಯುಕ್ತವಾಗಲಿವೆ. ಇವೆಲ್ಲವನ್ನು ಪರಿಗಣಿಸಿ ರೇಲ್ವೆ ಇಲಾಖೆ ಬಾರ್ಕೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆ ಅನುಮತಿಯನ್ನು ಹೊರಡಿಸಿದೆ.
ಕುಂದಾಪುರದಲ್ಲಿ ನೇತ್ರಾವತಿ ಎಕ್ಸಪ್ರೆಸ್ (train 1634546) ನಿಲುಗಡೆ ಬಗ್ಗೆ, ಸಾರ್ವ ಜನಿಕರಿಂದ ಒತ್ತಾಯವಿದ್ದು, ಈ ಬಗ್ಗೆ, ಕುಂದಾಪುರದ ರೇಲ್ವೆ ಹೋರಾಟ ಸಮಿತಿ ಮತ್ತು ಇತರ ಸಂಘಟನೆಗಳು ಮನವಿ ಮಾಡಿ ಒತ್ತಾಯಿಸಿತ್ತು, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಸಹ ಈ ಕುರಿತು ಸಚಿವರಾದ ಶೋಭಾ ಕರಂದ್ಲಾಂಜೆಯವರೊಂದಿಗೆ ಸಭೆ ನಡೆಸಿ ನೇತ್ರಾವತಿ ಎಕ್ಸ್ ಪ್ರೆಸ್ ಅನ್ನು ಕುಂದಾಪುರದಲ್ಲಿ ನಿಲುಗಡೆಗೊಳಿಸಲು ಕ್ರಮ ಜರುಗಿಸಲು ಮನವಿ ಮಾಡಿದ್ದರು. ಕರೋನಾ ಸಮಯದಲ್ಲಿ ತಿರುವನಂತಪುರ ಮುಂಬಯಿ ಎಕ್ಸ್ ಪ್ರೆಸ್ (ನೇತ್ರಾವತಿ ಎಕ್ಸಪ್ರೆಸ್) ಕುಂದಾಪುರ ರೈಲು ನಿಲ್ದಾಣದಲ್ಲಿ ನಿಲುಗಡೆ ರದ್ದಾಗಿತ್ತು. ತದನಂತರ ನಿಲುಗಡೆ ಪಾರಂಭವಾಗದೆ ಕುಂದಾಪುರದಿಂದ ಮುಂಬಯಿ ಮತ್ತು ಗೋವಾಕ್ಕೆ ತೆರಳುವ ಮತ್ತು ಮುಂಬಯಿ ಮತ್ತು ಗೋವಾದಿಂದ ಕುಂದಾಪುರಕ್ಕೆ ಸಂಚರಿಸುವ ಹಲವಾರು ಪುಯಾಣಿಕರಿಗೆ ಅನಾನುಕೂಲತೆಯಾಗಿತ್ತು. ಪುಯಾಣಿಕರ ಈ ಸಮಸ್ಯೆಯನ್ನು ಬಗೆ ಹರಿಸುವ ನಿಟ್ಟಿನಲ್ಲಿ ನೇತ್ರಾವತಿ ಎಕ್ಸ್ ಪ್ರೆಸ್ ರೈಲನ್ನು ಕುಂದಾಪುರದಲ್ಲಿ ನಿಲುಗಡೆಗೆ ಕೇಂದ್ರ ರೇಲ್ವೆ ಸಚಿವರು ಆದೇಶಿಸಿದ್ದಾರೆ.
ಯಶವಂತಪುರ- ವಾಸ್ಕೋಡಾಗಾಮಾ ಎಕ್ಸ್ ಪ್ರೆಸ್ (17309/10) ಕಡೂರು ರೈಲು ನಿಲ್ದಾಣದಲ್ಲಿ ನಿಲುಗಡೆಗೊಳಿಸಲು ಈ ಭಾಗದ ಪುಯಾಣಿಕರು ಒತ್ತಾಯ ಮಾಡಿದ್ದರು. ಬೆಂಗಳೂರಿನಿಂದ ಗೋವಾಕ್ಕೆ ಗೋವಾದಿಂದ ಬೆಂಗಳೂರಿಗೆ ತೆರಳುವ ಈ ರೈಲಿಗೆ ಕಡೂರಿನಲ್ಲಿ ನಿಲುಗಡೆ ನೀಡುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆಯಂದು ಕೇಂದ್ರದ ರೇಲ್ವೆ ಸಚಿವರಿಗೆ ಮನವರಿಕೆ ಮಾಡಲಾಗಿತ್ತು. ಕೇಂದ್ರದ ರೈಲ್ವೆ ಸಚಿವರು ರೈಲು ಸಂಖ್ಯೆ 17309/10 (ಯಶವಂತಪುರ- ವಾಸ್-ಡ-ಗಾಮಾ ಎಕ್ಷಪೆಸ್)ಗೆ ಕಡೂರು ರೇಲ್ವೆ ನಿಲ್ದಾಣದಲ್ಲಿ ನಿಲುಗಡೆಗೆ ಆದೇಶಿಸಿದ್ದಾರೆ.