ಮಂಗಳೂರು, ಫೆ 28 (DaijiworldNews/DB): ದಕ್ಷಿಣ ಭಾರತದ ಹೆಸರಾಂತ ಹೃದ್ರೋಗ ಚಿಕಿತ್ಸಾ ಸಂಸ್ಥೆಯಾದ ಇಂಡಿಯಾನಾ ಆಸ್ಪತ್ರೆಯು ಒಂದೇ ದಿನದಲ್ಲಿ ಟ್ರಾನ್ಸ್ಕಾ ತಿಟರ್ ಮಹಾಪಧಮನಿಯ ಕವಾಟದ ಅಳವಡಿಕೆ ಹಾಗೂ ಟ್ರಾನ್ಸ್ಕಾ ತಿಟರ್ ಹೃದಯ ಕವಟು ಬದಲು ಇವೆರಡೂ ಅತ್ಯಾಧುನಿಕ ಚಿಕಿತ್ಸೆಯನ್ನು ಒಂದೇ ದಿನದಲ್ಲಿ ಯಶಸ್ವಿಯಾಗಿ ಮುಗಿಸಿದೆ. ಈ ಎರಡು ಅತ್ಯಾಧುನಿಕ ಚಿಕಿತ್ಸೆಗಳನ್ನು ಆರಂಭಿಸಿ ಚತುರ್ವರ್ಷ ಪೂರ್ಣಗೊಂಡ ಸಂಕೇತವಾಗಿ ಒಂದೇ ದಿನದಲ್ಲಿ ಎರಡನ್ನೂ ಯಶಸ್ವಿಯಾಗಿ ಮುಗಿಸಿರುವುದು ವಿಶೇಷ.
ಇವೆರಡೂ ಚಿಕಿತ್ಸೆಗಳು ಹೃದ್ರೋಗದ ಶಸ್ತ್ರಚಿಕಿತ್ಸೆಗೆ ಪರ್ಯಾಯ ಚಿಕಿತ್ಸೆಗಳಾಗಿ ಇಂಡಿಯಾನಾ ಆಸ್ಪತ್ರೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಆರಂಭವಾಗಿದ್ದವು. ಇವು ಹೆಚ್ಚು ಸರಳ ಮತ್ತು ಕಡಿಮೆ ನೋವಿನಿಂದ ಕೂಡಿದ ಚಿಕಿತ್ಸೆಯಾಗಿದ್ದು, ಹೃದಯ ಶಸ್ತ್ರಚಿಕಿತ್ಸೆಗೆ (ಓಪನ್ ಹಾರ್ಟ್ ಸರ್ಜರಿಗೆ) ಹೋಲಿಸಿದರೆ ತೀರಾ ಕಡಿಮೆ ಖರ್ಚಿನದ್ದಾಗಿದೆ. ಇದೀಗ ಇಂಡಿಯಾನ ಆಸ್ಪತ್ರೆಯು ಈ ಚಿಕಿತ್ಸೆಯನ್ನು ಆರಂಭಿಸಿದ ನಾಲ್ಕು ವರ್ಷಗಳಲ್ಲಿಯೂ 100 ಪ್ರತಿಶತಃ ಫಲಿತಾಂಶದೊಂದಿಗೆ ಯಶಸ್ಸು ಕಂಡಿದ್ದು, ಶಸ್ತ್ರಚಿಕಿತ್ಸೆಯಿಲ್ಲದೆ ಹೃದಯಕ್ಕೆ ಚಿಕಿತ್ಸೆ ನೀಡುವ ಅತ್ಯುತ್ತಮ ಹೃದ್ರೋಗ ಚಿಕಿತ್ಸಾ ಸಂಸ್ಥೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.
TAVI/TAVR ಹೃದಯ ಶಸ್ತ್ರಚಿಕಿತ್ಸೆಗೆ ಪರ್ಯಾಯ ಚಿಕಿತ್ಸೆಯಾಗಿ 2019ರಲ್ಲಿ ಮಂಗಳೂರಿನಲ್ಲೇ ಪ್ರಥಮ ಬಾರಿಗೆ ಇಂಡಿಯಾನಾ ಆಸ್ಪತ್ರೆಯಲ್ಲಿ ಪ್ರಾರಂಭವಾಯಿತು. 2020ರಲ್ಲಿ ಕರ್ನಾಟಕದಲ್ಲೇ ಮೊಟ್ಟ ಮೊದಲ ಬಾರಿಗೆ ಮಿಟ್ರಲ್ ರಿಪ್ಲೇಸ್ಮೆಂಟ್ನ್ನು ಯಶಸ್ವಿಯಾಗಿ ಮಾಡಿ ಮುಗಿಸಿದ ಶ್ರೇಯಸ್ಸನ್ನೂ ಇಂಡಿಯಾನಾ ಆಸ್ಪತ್ರೆ ತನ್ನದಾಗಿಸಿಕೊಂಡಿತು.
ಕಳೆದ ನಾಲ್ಕು ವರ್ಷಗಳಲ್ಲಿ ಇಂಡಿಯಾನಾ ಆಸ್ಪತ್ರೆಯು ನಿರಂತರವಾಗಿ ಹೃದ್ರೋಗದ ಚಿಕಿತ್ಸೆಯನ್ನು ಸಂಪೂರ್ಣ ಯಶಸ್ಸು ಮತ್ತು ಆಶ್ಚರ್ಯಕರ ಫಲಿತಾಂಶದೊಂದಿಗೆ ನೀಡುತ್ತಿದೆ. ಭಾರತದಲ್ಲಿ ಹೃದ್ರೋಗದ ಹೆಚ್ಚಳವು ಮೊದಲೆಲ್ಲಾ ಜನರನ್ನು ಹೆಚ್ಚು ಆತಂಕಕ್ಕೀಡು ಮಾಡಿತ್ತು. ಆದರೆ ಈಗ ಅತ್ಯಾಧುನಿಕ ಚಿಕಿತ್ಸೆಯಿಂದಾಗಿ ಸನ್ನಿವೇಶ ಬದಲಾಗಿದೆ. ಮೊದಲಿನ ಭಯ ಈಗಿಲ್ಲ. ಹೃದ್ರೋಗಕ್ಕೆ ಶಸ್ತ್ರಚಿಕಿತ್ಸೆಗೆ ಪರ್ಯಾಯವಾಗಿ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಅತ್ಯಾಧುನಿಕ ಚಿಕಿತ್ಸೆ ನೀಡುವಲ್ಲಿ ಇಂಡಿಯಾನಾ ಆಸ್ಪತ್ರೆಯು ಸದಾ ಮುಂದಿದೆ. ನಮ್ಮಲ್ಲಿ ಈವರೆಗೆ ಶಸ್ತ್ರ TAVI/TAVR, ಹೃದಯದ ಅಪಧಮನಿ, ಕವಾಟು ಬದಲಿ ಮಿಟ್ರಲ್ ವಾಲ್ವ್ ರಿಪ್ಲೇಸ್ಮೆಂಟ್ ಮುಂತಾದ ಹೃದಯ ಶಸ್ತ್ರಚಿಕಿತ್ಸೆ ಬದಲಿಗೆ ಈ ಎಲ್ಲಾ ಪರ್ಯಾಯ ಚಿಕಿತ್ಸೆಗಳೆಲ್ಲವೂ ಶೇ. 100 ಯಶಸ್ಸಿನೊಂದಿಗೆ ಕಾರ್ಯಾಚರಿಸಲಾಗಿದೆ ಎಂದು ಆಸ್ಪತ್ರೆಯ ನಿರ್ದೇಶಕ ಯೂಸುಫ್ ಕುಂಬ್ಳೆ ಹೇಳಿದ್ದಾರೆ.
ಇಂಡಿಯಾನಾ ಹೃದ್ರೋಗ ಪರಿಣತ ವೈದ್ಯರ ತಂಡವು ಅತ್ಯಾಧುನಿಕ ಚಿಕಿತ್ಸೆಗಳ ತಂತ್ರಗಳೊಂದಿಗೆ ಸಂಪೂರ್ಣವಾಗಿ ಸಜ್ಜುಗೊಂಡಿದೆ. ಮೆಟ್ರೋ ನಗರಗಳಿಗೆ ಹೋಲಿಸಿದರೆ ತೀರಾ ಕಡಿಮೆ ವೆಚ್ಚದಲ್ಲಿ ಈ ಪ್ರದೇಶಗಳಲ್ಲಿ ರೋಗಿಗಳು ಶಸ್ತ್ರಚಿಕಿತ್ಸೆ ಇಲ್ಲದೆ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಿದೆ. ಹೀಗಾಗಿಯೇ ಇಂಡಿಯಾನಾ ಆಸ್ಪತ್ರೆಯು TAVI/TAVRನಂತಹ ಅತ್ಯಾಧುನಿಕ ಕಾರ್ಯ ವಿಧಾನಗಳಿಗೆ ಹೆಚ್ಚು ಬೇಡಿಕೆಯಿರುವ ಆಸ್ಪತ್ರೆಯಾಗಿದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.