ಕಾರ್ಕಳ, ಫೆ 28 (DaijiworldNews/MS): ನರ್ಸರಿಯಿಂದ ಉನ್ನತ ಶಿಕ್ಷಣ ವರೆಗೆ ಎಲ್ಲಾ ವಿದ್ಯಾರ್ಥಿಗಳಿಗು ಪ್ರಯೋಜನವಾಗಲು ಡಿಜಿಟಲ್ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಆಧ್ಯಯನ ಕೇಂದ್ರದ ನಿರ್ಮಾಣ ಮಾಡಲಾಗಿದೆ.ಸರಕಾರ ಹಾಗೂ ಸಿಎಸ್ ಅರ್ ನ ಒಂದು ಕೋಟಿ ಅನುದಾನದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣ ವಾಗಿದೆ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ ಸುನೀಲ್ ಕುಮಾರ್ ಹೇಳಿದರು.
ಮಂಗಳವಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ , ಜಿಲ್ಲಾ ಕೇಂದ್ರ ಗ್ರಂಥಾಲಯ ಉಡುಪಿ, ಮತ್ತು ಪುರಸಭೆ ಕಾರ್ಕಳ. ಇದರ ಸಹಯೋಗದೊಂದಿಗೆ ಕಾರ್ಕಳ ಪುರಸಭಾ ವ್ಯಾಪ್ತಿಯ ಗಾಂಧಿ ಮೈದಾನ ಬಳಿ ಶಾಖಾ ಗ್ರಂಥಾಲಯ ನೂತನ ಕಟ್ಟಡ ಡಿಜಿಟಲ್ ಗ್ರಂಥಾಲಯ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ಆಧ್ಯಯನ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಫೇಸ್ ಬುಕ್, ವಾಟ್ಸಾಪ್ ಗಳೆ ಹೆಚ್ಚಾಗಿರುವ ಈ ಹೊತ್ತಿನಲ್ಲಿ ಓದುಗರ ಸಂಖ್ಯೆ ಹೆಚ್ಚಾಗಬೇಕಾಗಿದೆ. ತಂತ್ರ ಜ್ಞಾನಕ್ಕೆ ತಕ್ಕಂತೆ ಗ್ರಂಥಾಲಯಗಳು ಡಿಜಿಟಲೀಕರಣ ಗೊಳ್ಳಬೇಕು. ಹೊಸ ಹೊಸ ಉಪನ್ಯಾಸ ಮಾಲಿಕೆಗಳು, ಪ್ರವಚನಗಳನ್ನು ಒದಗಿಸಲು ಸನ್ನದ್ದವಾಗಬೇಕು .
ಅಂಡಾರು ಕಬ್ಬಿನಾಲೆ ಭಾಗಗಳಲ್ಲಿ ಓದುವ ಹವ್ಯಾಸಿಗಳಿಗೆ ಅನುವಾಗಲು ಸ್ಥಳೀಯರ ಸಹಕಾರ ದಿಂದ ಹದಿನೈದು ಲಕ್ಷ ಹಾಗೂ ರಾಜರಾಮ ಮೊಹನ ರಾಯ್ ಪ್ರತಿಷ್ಠಾನ ಹದಿನೈದು ಲಕ್ಷ ಒಟ್ಟು ಮೂವತ್ತು ಲಕ್ಷ ರೂಪಾಯಿ ವೆಚ್ಚದಲ್ಲಿ ಮೊಬೈಲ್ ಗ್ರಂಥಾಲಯ ನಿರ್ಮಿಸಲು ಸಿದ್ದರಾಗಿದ್ದೇವೆ ಎಂದು ಬೆಂಗಳೂರು ಗ್ರಂಥಾಲಯ ನಿರ್ದೇಶಕ ಸತೀಶ್ ಹೊಸಮನಿ ಅವರಿಗೆ ಭರವಸೆ ನೀಡಿದರು. ಮಾ.7 ರಿಂದ ಮಾ.14 ರ ವರೆಗೆ ಕಾರ್ಕಳ ಕೋಟೆ ಮಾರಿಯಮ್ಮ ದೇವಾಸ್ಥಾನದ ಬ್ರಹ್ಮಕಲಶೊತ್ಸವ ಹಾಗೂ ಎಪ್ರಿಲ್ 19 ರಂದು ಜ್ಞಾನ ಮಂದಿರ ಉದ್ಘಾಟನೆ ಯಲ್ಲಿ ಭಾಗಿಯಾಗುವಂತೆ ಸಾರ್ವಜನಿಕರಿಗೆ ಮನವಿ ಮಾಡಿದರು
ಬೆಂಗಳೂರು ಗ್ರಂಥಾಲಯ ನಿರ್ದೇಶಕ ಸತೀಶ್ ಹೊಸಮನಿ ಪ್ರಾಸ್ತಾವಿಕ ಮಾತನಾಡಿ ರಾಜ್ಯದಲ್ಲಿ ಸುಮಾರು 7000 ಗ್ರಂಥಾಲಯ ಗಳು ಕಾರ್ಯನಿರ್ವಹಿಸುತ್ತಿವೆ. ಕಾರ್ಕಳ ತಾಲೂಕು ಗ್ರಂಥಾಲಯ ಒಂದು ಕೋಟಿ ಅನುದಾನದಲ್ಲಿ ಮೆಲ್ದರ್ಜೆಗೆ ಏರಿಸಲಾಗಿದೆ . ಉಡುಪಿ ಜಿಲ್ಲೆಯಲ್ಲಿ ಹನ್ನೊಂದು ಲಕ್ಷ ಜನ ಡಿಜಿಟಲ್ ಗ್ರಂಥಾಲಯ ದಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು ರಾಜ್ಯದಲ್ಲಿ 11 ತಿಂಗಳ ಅವಧಿಯಲ್ಲಿ ಮೂರು ಕೋಟಿ ಎಫ್ಪತ್ತೆಂಟು ಲಕ್ಷ ಜನ ಡಿಜಿಟಲ್ ಗ್ರಂಥಾಲಯದಲ್ಲಿ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ . .ಇಡಿ ಜಗತ್ತಿನಲ್ಲಿ ಕರ್ನಾಟಕ ಗ್ರಂಥಾಲಯ ವಿಶ್ವದ ಮೊದಲ ಅತಿ ಹೆಚ್ಚು ನೊಂದಾಯಿತ ಗ್ರಂಥಾಲಯ ವಾಗಿದ್ದು ಅಮೆರಿಕದ ಗ್ರಂಥಾಲಯ ಎರಡನೇ ಸ್ತಾನದಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಪುಸ್ತಕ ಗಳು ಬದುಕಿನ ದಾರಿ ದೀಪಗಳಾಗಿವೆ . ಓದನ್ನು ಹೆಚ್ಚಿಸಿ ಉತ್ತಮ ಚಿಂತನೆಗಳನ್ನು ಬೆಳೆಸಿಕೊಳ್ಳಿ ಎಂದರು.
ಪ್ರಾಂಶುಪಾಲೆ ಮಿತ್ರಪ್ರಭಾ ಹೆಗ್ಡೆ ಶುಭಾಸಂಸನೆಗೈದರು. ಉದ್ಯಮಿ ದಾಮೊದರ್ ಕಾಮತ್ ಮಾತನಾಡಿದರು. ಕಾರ್ಕಳ ಗ್ರಂಥಾಲಯದಲ್ಲಿ ಸೇವೆ ಸಲ್ಲಿಸಿದ ಹಿರಿಯರು ಹಾಗು ದಾನಿಗಳನ್ನು ಗೌರವಿಸಲಾಯಿತು.
ಸಭೆಯಲ್ಲಿ ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮಾ ಕೇಶವ, ಉಪಾಧ್ಯಕ್ಷೆ ಪಲ್ಲವಿ , ಮುಖ್ಯಾಧಿಕಾರಿ ರೂಪ ಶೆಟ್ಟಿ , ಉಡುಪಿ ಜಿಲ್ಲಾ , ಸದಸ್ಯೆ ಶೋಭ ದೇವಾಡಿಗ , ಜಯಶ್ರೀ ಎಂ, ಗ್ರಂಥಾಲಯ ಪ್ರಾಧಿಕಾರದ ಮೀನಾಕ್ಷಿ ಗಂಗಾಧರ, ಶೋಭ, ಗ್ರಂಥಪಾಲಕಿ ಜಯಶ್ರೀ, ಉಪಸ್ಥಿತರಿದ್ದರು. ರಮ್ಯ ಸುಧೀಂದ್ರ ಪ್ರಾರ್ಥಿಸಿದರು.ರಾಜೇಂದ್ರ ಕಾರ್ಯಕ್ರಮ ನಿರೂಪಿಸಿದರು.