ಮಂಗಳೂರು, ಫೆ 28 (DaijiworldNews/MS): ಕಾಮಗಾರಿಯೊಂದರ ಬಿಲ್ ಮಂಜೂರು ಲಂಚ ಪಡೆದ ಆರೋಪದಡಿ ಬಂಧಿಸಲ್ಪಟ್ಟಿದ್ದ ಆರೋಪಿಗೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಸಹಾಯಕ ಕಿರಿಯ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರೂಪ ಅವರು ಕಾಮಗಾರಿಯೊಂದರ ಬಿಲ್ ಮಂಜೂರು ಮಾಡಲು ದೂರುದಾರರಿಂದ ರೂ. 10ಸಾವಿರ ಲಂಚ ಪಡೆದ ಆರೋಪದಲ್ಲಿ ಫೆ.20 ರಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಮಂಗಳೂರು ಲೋಕಾಯುಕ್ತ ಪೊಲೀಸರು ಬಂಧಿಸಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದರು.
ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶ ಬಸಪ್ಪ ಬಾಳಪ್ಪ ಜಕತಿ ಇವರು ಆರೋಪಿತೆ ರೂಪ ಇವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿರುತ್ತಾರೆ. ಆರೋಪಿತೆಯ ಪರವಾಗಿ ವಕೀಲರಾದ ವೈ ವಿಕ್ರಮ್ ಹೆಗ್ಡೆ ಮತ್ತು ಎನ್ ನರಸಿಂಹ ಹೆಗ್ಡೆ ಹಾಗೂ ಅಬ್ದುಲ್ ನಝೀರ್ ಮೂಡುಶೆಡ್ಡೆ ವಾದಿಸಿದ್ದರು.