ಕಾಸರಗೋಡು, ಫೆ. 27 (DaijiworldNews/SM): ವಿದ್ಯುತ್ ಶುಲ್ಕವನ್ನು ನೇರವಾಗಿ ಪಾವತಿಸುವ ಗ್ರಾಹಕ ರ ಸಂಖ್ಯೆ ಇಳಿಮುಖವಾಗಿದ್ದು, ಆನ್ ಲೈನ್ ಮೂಲಕ ಪಾವತಿ ಮಾಡುತ್ತಿರುವ ಹಿನ್ನಲೆಯಲ್ಲಿ ವಿದ್ಯುತ್ ಮಂಡಳಿ ಕಚೇರಿಗಳಲ್ಲಿ ಶುಲ್ಕ ಪಾವತಿ ಕೌಂಟರ್ ಗಳ ಸಂಖ್ಯೆ ಕಡಿಮೆ ಮಾಡಲು ಹಾಗೂ ಸಮಯವನ್ನು ಪರಿಷ್ಕರಿಸಲಾಗಿದೆ.
, ಉದುಮ, ಕುತ್ತಿಕ್ಕೋಲ್, ನೆಲ್ಲಿಕುಂಜೆ , ಕಾಸರಗೋಡು, ಮುಳ್ಳೇರಿಯ ಮತ್ತು ಬದಿಯಡ್ಕ ವಿದ್ಯುತ್ ವಿಭಾಗಗಳಲ್ಲಿ ಕೇವಲ ಒಂದು ವಿಭಾಗದಲ್ಲಿ ಮಾತ್ರ ಕ್ಯಾಶ್ ಕೌಂಟರ್ ಮಾರ್ಚ್ 1 ರಿಂದ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಕಾರ್ಯನಿರ್ವಹಿಸಲಿದೆ ಎಂದು ವಿಭಾಗದ ಕಾರ್ಯಪಾಲಕ ಅಭಿಯಂತರ ಕೆ ನಾಗರಾಜ ಭಟ್ ತಿಳಿಸಿದ್ದಾರೆ.
ಚೆರ್ಕಳ ಮತ್ತು ಉಪ್ಪಳ ವಿದ್ಯುತ್ ವಿಭಾಗಗಳಲ್ಲಿ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ , ವರ್ಕಾಡಿ, ಪೈವಳಿಕೆ, ಪೆರ್ಲ, ಮಂಜೇಶ್ವರ, ಕುಂಬಳೆ ಸೀತಾಂಗೋಳಿ ಮತ್ತು ಚಟ್ಟಂಚಾಲ್ ಮೊದಲಾದೆಡೆ ಬೆಳಗ್ಗೆ 9ರಿಂದ ಮಧ್ಯಾಹ್ನ 3ರವರೆಗೆ ಒಂದು ಕೌಂಟರ್ ಕಾರ್ಯಾಚರಿಸ ಲಿದೆ.
ಪ್ರಸ್ತುತ ವಿದ್ಯುತ್ ಮಂಡಳಿಯ ವಿದ್ಯುತ್ ಶುಲ್ಕ ಸೇರಿದಂತೆ ಹಣವನ್ನು ಆನ್ ಲೈನ್ ಮೂಲಕ, ಅಕ್ಷಯ ಕೇಂದ್ರಗಳ ಮೂಲಕ, ಜನಸೇವಾ ಕೇಂದ್ರಗಳ ಮೂಲಕ ಹಾಗೂ ಇ-ಕೇಂದ್ರದ ಮೂಲಕ ಪಾವತಿಸುವ ಸೌಲಭ್ಯವನ್ನು ವಿದ್ಯುತ್ ಮಂಡಳಿ ಕಲ್ಪಿಸಿದೆ.
ಇದಲ್ಲದೆ ನೇರ ಪಾವತಿಗೂ ಸೌಲಭ್ಯ ಕಲ್ಪಿಸಲಾಗಿದೆ.