ಉಡುಪಿ, ಫೆ 27 (DaijiwsorldNews/HR): ಈ ಬಾರಿ ಉಡುಪಿ ಜಿಲ್ಲೆಯಲ್ಲಿ ಎಲ್ಲ ಐದು ಸೇರಿದಂತೆ ರಾಜ್ಯದಲ್ಲಿ ಮೊದಲ ಬಾರಿಗೆ 150 ಸ್ಥಾನ ಗೆಲ್ಲುವ ಮೂಲಕ ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ತಮಿಳುನಾಡು ಬಿಜೆಪಿ ರಾಜಾದ್ಯಕ್ಷರು ಹಾಗೂ ರಾಜ್ಯ ವಿಧಾನ ಸಭೆಯ ಚುನಾವಣೆ ಸಹ ಉಸ್ತುವಾರಿಯಾಗಿರುವ ಅಣ್ಣಾಮಲೈ ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಗೆ ಫೆಬ್ರವರಿ 27 ಭೇಟಿ ನೀಡಿ ಮಾತನಾಡಿದ ಅವರು, ಉಡುಪಿಯ 5 ವಿಧಾನಸಭಾ ಕ್ಷೇತ್ರದ್ಯಾದಂತ ಸಂಚರಿಸಲಿರುವ 5 ಪ್ರಗತಿ ರಥ ಚಾಲನೆ ನೀಡಿದ್ದು ರಾಷ್ಟ್ರದಲ್ಲಿ ಎಲ್ಲಾಕಡೆಯು ಅಭಿವೃದ್ದಿಯಾಗುತ್ತಿದೆ ವಿರೋಧ ಪಾರ್ಟಿಯವರು ಕೇವಲ ಆರೋಪವನ್ನು ಮಾತ್ರ ಮಾಡುತ್ತ ಹೋಗುತ್ತಿದ್ದಾರೆ. ಕಾಂಗ್ರೆಸ್ ಮಾಡುವ ಆರೋಪಗಳಿಗೆ ನಮ್ಮ ಕಾರ್ಯಕರ್ತರು ಉತ್ತರ ನೀಡುವ ಅಗತ್ಯ ಇಲ್ಲ ಕಾಂಗ್ರೆಸ್ ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಪ್ಯ್ಲಾನ್ ಮಾಡಿದೆ. ಮುಂದಿನ ಎಂ.ಪಿ ಚುನಾವಣೆಗೆ ಕರ್ನಾಟಕ ಬಜೆಟ್ ನ ಶೇ. 10 ರಷ್ಟು ಬಳಸುವ ಯೋಚನೆ ಮಾಡಿದೆ. ಬಾಯಿ ಇರುವುದು ಮಾತನಾಡಲು ಸುಳ್ಳು ಹೇಳಲು ಅಲ್ಲ ಎಂಬುದನ್ನು ಕಾಂಗ್ರೆಸ್ ಪಕ್ಷದವರು ತಿಳಿದು ಕೊಳ್ಳಬೇಕು, ಅದರಲ್ಲೂ ಹೆಣ್ಣು ಮಕ್ಕಳಿಗೆ 1000 ರೂ ಕೊಡ್ತಿವಿ ಕರ್ನಾಟಕದಲ್ಲಿ 2000 ರೂ ಎಂದು ಹುಸಿ ಭರವಸೆಗಳನ್ನು ಕೊಡ್ತಾಇದ್ದಾರೆ. ಆದರೆ ಬಿಜೆಪಿ ಹಲವಾರು ಅಭಿವೃದ್ದಿಯನ್ನು ಮಾಡುತ್ತಿದೆ ಎಂದರು.
ಇನ್ನು ಕರ್ನಾಟಕದಲ್ಲಿ ಚುನಾವಣೆ ಬರುತ ಇದು ತುಂಬಾ ಪ್ರಮುಖವಾದುದು. ಸೂಚಕಗಳ ಪ್ರಕಾರ ಉಳಿದ ರಾಜ್ಯಕ್ಕಿಂತ ಕರ್ನಾಟಕದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ನಮ್ಮ ಬಳಿ ಅಭಿವೃದ್ದಿ ಇದೆ. ಡಬಲ್ ಎಂಜಿನ್ ಸರಕಾರ ಇದೆ ಭಾರತದ ಅಭಿವೃದ್ದಿ ಜೊತೆ ಕರ್ನಾಟಕ ಜನ ನಿಲ್ಲುತ್ತಾರೆ. ಶಿಕ್ಷಣ ಮತ್ತು ಜಿಎಸ್ ಟಿ, ತೆರಿಗೆ ಸಂಗ್ರಹ ಹಾಗೂ ಉದ್ಯಮದಲ್ಲಿ ಕರ್ನಾಟಕ ನಂಬರ್ ಒನ್ ಇದೆ. ನಾವು ಕೆಲಸ ಮಾಡಿದ್ದೇವೆ. ಅದನ್ನು ರಾಜ್ಯದ ಜನಕ್ಕೆ ಮುಟ್ಟಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕರಾದ ರಘುಪತಿಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಬಿಜೆಪಿ ಉಪಾಧ್ಯಕ್ಷೆ ನಯಾನ ಗಣೇಶ್, ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಉಡುಪಿ ಮಂಗಳೂರು ವಿಭಾಗ ಪ್ರಭಾರಿ ಉದಯ್ ಕುಮಾರ್ ಶೆಟ್ಟಿ, ಉಡುಪಿ ನಗರ ಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮನೋಹರ್ ಕಲ್ಮಾಡಿ ಉಪಸ್ಥಿತರಿದ್ದರು.