ಮಂಗಳೂರು,ಫೆ 27 (DaijiworldNews/MS): ಸಂಸ್ಕೃತವು ಯಾವುದೇ ಧರ್ಮಕ್ಕೆ ಸಂಬಂಧಿಸಿದ ಭಾಷೆಯಲ್ಲ, ಇದು ಸಾರ್ವತ್ರಿಕ ಭಾಷೆ. ನಾವು ಆಯ್ಕೆಯಿಂದ ಭರತವರ್ಷದಲ್ಲಿ ಹುಟ್ಟಿಲ್ಲ ಆದರೆ ವೈವಿಧ್ಯಮಯ ಸಂಸ್ಕೃತಿಯೊಂದಿಗೆ ಇಲ್ಲಿ ಹುಟ್ಟಿದ ನಾವು ಅದೃಷ್ಟವಂತರು ಎಂದು ಕೆನಡಾ ದೇಶದ ಇಸ್ಕಾನ್ ನ ಭಕ್ತಿ ರಾಘವ ಸ್ವಾಮಿ ಮಹಾರಾಜ್ ಹೇಳಿದರು.
ಫೆ.26ರಂದು ಶ್ರೀನಿವಾಸ ವಿಶ್ವವಿದ್ಯಾಲಯದ ಮುಕ್ಕ ಕ್ಯಾಂಪಸ್ನಲ್ಲಿ ವಿಶ್ವ ಸಂಸ್ಕೃತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹೈದರಾಬಾದ್ ನ ತಂತ್ರಜ್ಞ ಹಾಗೂ ಶಿಕ್ಷಣ ತಜ್ಞ ಡಾ.ವಿಠಲ ಜೋಶಿ ಮಾತನಾಡಿ, ಸಂಸ್ಕೃತ ದ ಅರಿವಿಲ್ಲದೇ ಯಾರೂ ಕೂಡ ವಿದ್ವಾಂಸನಾಗಲು ಸಾಧ್ಯವಿಲ್ಲ. ಸಂಸ್ಕೃತ ಆಚರಣೆಗಳ ಭಾಷೆಯಲ್ಲ ಸನಾತನ ಭಾಷೆ ಎಂಬುದನ್ನು ನಾವು ತಿಳಿಯಬೇಕಿದೆ. ಸಂಸ್ಕೃತ ಗೊತ್ತಿದ್ದರೆ ಬೇರೆ ಭಾಷೆಗಳನ್ನು ಕಲಿಯುವುದು ಬಲು ಸುಲಭ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಾಧಿಪತಿ ಸಿಎ.ಎ ರಾಘವೇಂದ್ರ ರಾವ್ ಮಾತನಾಡಿ, ಸಂಸ್ಕೃತ ಭಾಷೆಯಲ್ಲಿ ಇನ್ನಷ್ಟು ಸಂಶೋಧನೆಗೆ ಸರಕಾರ ನೆರವು ಹಾಗೂ ಸಹಕಾರ ನೀಡಬೇಕು. ಈ ಸಮ್ಮೇಳನದ ಮೂಲಕ ಸಂಸ್ಕೃತ ಭಾಷೆ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಹೊಸ ಕ್ರಾಂತಿ ನಡೆಯಲಿದೆ ಎಂಬ ಭರವಸೆ ಇದೆ. ಸಂಸ್ಕೃತ ಎಂಬ ಸಾಗರದಲ್ಲಿ ನಮ್ಮ ಈ ಸಮ್ಮೇಳನವು ಒಂದು ಹನಿಯಂತೆ ಎಂದರು.
ಶ್ರೀನಿವಾಸ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ ಎ. ಶ್ರೀನಿವಾಸ ರಾವ್, ಶ್ರೀನಿವಾಸ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಟ್ರಸ್ಟಿಗಳಾದ ಶ್ರೀಮತಿ ಎ. ವಿಜಯಲಕ್ಷ್ಮಿ ಆರ್. ರಾವ್, ಪ್ರೊ. ಇಆರ್ ಎ. ಮಿತ್ರಾ ಎಸ್. ರಾವ್, ಶ್ರೀಮತಿ ಪದ್ಮಿನಿ ಕುಮಾರ್, ಬೆಂಗಳೂರಿನ ತಜ್ಞರಾದ ಡಾ. ಉದಯ ಕುಮಾರ್ ಮಯ್ಯ, ಉಪಕುಲಪತಿ ಡಾ ಪಿ ಎಸ್ ಐತಾಳ್, ರಿಜಿಸ್ಟರ್ ಆದಿತ್ಯಕುಮಾರ್ ಮಯ್ಯ, ಡಾ ದೀಪಿಕಾ ಆದಿತ್ಯ ಕುಮಾರ್ ಮಯ್ಯ, ಮೌಲ್ಯಮಾಪನ ರಿಜಿಸ್ಟರ್ ಶ್ರೀ ನಿವಾಸ ಮಯ್ಯ ಡಿ., ಅಭಿವೃದ್ಧಿ ರಿಜಿಸ್ಟರ್ ಡಾ ಅಜಯ್ ಕುಮಾರ್, ಸಹ ಸಂಚಾಲಕರಾದ ಡಾ. ಬಿ. ಗೋಪಾಲಚಾರ್ ಮುಂತಾದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ಭಗವದ್ಗೀತೆ ಪಠಣ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮ್ಮೇಳನದಲ್ಲಿ ವಿಚಾರ ಮಂಡಿಸಿದ ಸಂಶೋಧನಾರ್ಥಿಗಳನ್ನು ಗೌರವಿಸಲಾಯಿತು.
ರಿಜಿಸ್ಟರ್ ಡಾ ಅನಿಲ್ ಕುಮಾರ್ ಸ್ವಾಗತಿಸಿ, ಇನ್ಸ್ಟಿಟ್ಯೂಟ್ ಅಫ್ ಫಿಸಿಯೋತೆರಪಿಯ ಡೀನ್ ಡಾ.ರಾಜಶೇಖರ್ ವಂದಿಸಿದರು. ಡಾ. ವಿಜಯಲಕ್ಷ್ಮಿ, ಪ್ರೊ ರೋಹನ್ ಫೆರ್ನಾಂಡಿಸ್ , ಡಾ. ಅಂಬಿಕಾ ಮಯ್ಯ ವಂದಿಸಿದರು.
ಶ್ರೀನಿವಾಸ ಕಲ್ಯಾಣೋತ್ಸವ:
ಶ್ರೀನಿವಾಸ ಕಾಲೇಜಿನ ಮುಕ್ಕ ಕ್ಯಾಂಪಸ್ನ ವಿಶ್ವ ಸಮ್ಮೇಳನ ಸಭಾ ಮಂಟಪದಲ್ಲಿ ತಿರುಪತಿ ಪದ್ಮಾವತಿ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಿತು.