ವಿಟ್ಲ, ಫೆ 27 (DaijiworldNews/MS): ಮಲಗಿ ನಿದ್ರಿಸುತ್ತಿದ್ದ ವ್ಯಕ್ತಿ ಬೆಳಗ್ಗೆ ಏಳದಿರುವುದನ್ನು ಗಮನಿಸಿ ಆಸ್ಪತ್ರೆಗೆ ಕರೆದು ತಂದ ಸಂದರ್ಭ ಮೃತಪಟ್ಟಿರುವುದು ದೃಢಪಟ್ಟಿದ್ದು, ಅನುಮಾನಸ್ಪದ ಸಾವಿನ ಕುರಿತು ದೂರು ದಾಖಲಾದ ಹಿನ್ನಲೆಯಲ್ಲಿ ವಿಟ್ಲ ಪೊಲೀಸರು ವಿಶೇಷ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಇಡ್ಕಿದು ಕುಮೇರು ನಿವಾಸಿ ಅರವಿಂದ ಭಾಸ್ಕರ (39) ಮೃತ ವ್ಯಕ್ತಿ. ಫೆ.25ರಂದು ರಾತ್ರಿ 10ರಿಂದ ಫೆ.26ರ ಬೆಳಗ್ಗೆ 7.30ರ ಮಧ್ಯದ ಸಮಯದಲ್ಲಿ ಇಡ್ಕಿದು ಗ್ರಾಮದ ಅರ್ಕೆಚ್ಚಾರು ಕುಮೇರು ಎಂಬಲ್ಲಿ ವಾಸದ ಮನೆಯ ಕೋಣೆಯಲ್ಲಿ ಮಲಗಿದ್ದಲ್ಲಿಯೇ ಇದ್ದುದನ್ನು ಗಮನಿಸಿದ ಪತ್ನಿಆಶಾ, ಪತ್ನಿಯ ತಂದೆ ಹಾಗೂ ಕೆಲವು ವ್ಯಕ್ತಿಗಳು ಸೇರಿಕೊಂಡು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆಗೆದುಕೊಂಡು ಬಂದಿದ್ದು, ವೈದ್ಯರು ಮೃತಪಟ್ಟ ಬಗ್ಗೆ ಧೃಢಪಡಿಸಿದ್ದಾರೆ.
ಕುಡಿಯುವ ವಿಚಾರ ಬಿಟ್ಟರೆ ಆರೋಗ್ಯವಾಗಿದ್ದ ವ್ಯಕ್ತಿ ಏಕಾಏಕಿ ಮಲಗಿದಲ್ಲಿಯೇ ಸತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಮೃತ ಅರವಿಂದ ಭಾಸ್ಕರನ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯವಿರುವುದಾಗಿ ವಿಟ್ಲ ಕಸಬಾ ಗ್ರಾಮ ರಘುನಾಥ ಎಂಬವರು ದೂರು ನೀಡಿದ್ದಾರೆ
ಆರೋಪಿಗಳಾದ ಮನೆಗೆ ಬಂದು ಹೋಗುತ್ತಿದ್ದ ಯೋಗೀಶ ಗೌಡ ಹಾಗೂ ಅರವಿಂದ ಭಾಸ್ಕರನ ಪತ್ನಿ ಆಶಾರವರು ಒಟ್ಟು ಸೇರಿಕೊಂಡು ಕೊಲೆ ಮಾಡುವ ಸಮಾನ ಉದ್ದೇಶದಿಂದ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಬಗ್ಗೆ ಸಂಶಯ ಇರುವುದಾಗಿ ದೂರು ನೀಡಿದ್ದು ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.