ಕಾರ್ಕಳ, ಫೆ 26 (DaijiworldNews/HR): ವ್ಯಕ್ತಿಯೊಬ್ಬರು ಸಾವಿಗೀಡಾದ ಬಳಿಕ ಅವರ ಹೆಸರಿನಲ್ಲಿ ಇದ್ಧ ಕೋಟ್ಯಾಂತರ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಶೇರುಗಳು ಮತ್ತು ಕೋಟ್ಯಾಂತರ ರೂಪಾಯಿ ನಗದನ್ನು ಆರೋಪಿಗಳಿಬ್ಬರು ತಮ್ಮ ಹೆಸರಿಗೆ ವರ್ಗಾಯಿಸಿರುವ ಕೃತ್ಯ ಬೆಳಕಿಗೆ ಬಂದಿದೆ.
ನಗರದ ಪುನೀತ್ ರಾವ್ ಈ ಕುರಿತು ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ನ್ಯಾಯಾಲಯದ ನಿರ್ದೇಶನದಂತೆ ಆರೋಪಿಗಳಾದ ಕಾರ್ಕಳ ಬಸ್ ನಿಲ್ದಾಣ ಬಳಿಯ ದಿನೇಶ್ ಕೆ(51), ಪೆರ್ವಾಜೆ ರಸ್ತೆಯ ಗುದ್ದೆಲ್ ಬಾಕ್ಯಾರ್ ನ ಪ್ರಸಾದ್(27) ಎಂಬವರ ವಿರುದ್ಧ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿರುತ್ತದೆ.
ಪ್ರಕರಣದ ದೂರುದಾರ ಪುನೀತ್ ರಾವ್ ರವರ ತಂದೆ ಅಶೋಕ್ ರಾವ್ ಅವರ ಹೆಸರಿನಲ್ಲಿ ಕಾರ್ಕಳ ನಗರದ ವಿವಿದೆಡೆಗಳಲ್ಲಿ ಸ್ಥಿರಾಸ್ತಿಗಳಿದ್ದು, ಅದರ ಮೌಲ್ಯವು ಕೋಟ್ಯಾಂತರ ರೂಪಾಯಿ ಆಗಿರುತ್ತದೆ. ಮಾತ್ರವಲ್ಲದೆರ ಬ್ಯಾಂಕ್ ಖಾತೆ ಹಾಗೂ ವಿವಿಧ ಶೇರು ಹೊಂದಿದ್ದರು. ತನ್ನ ಜೀವತಾವಧಿಯ ಕೊನೆಯ ದಿನಗಳಲ್ಲಿ ಅಶೋಕ ರಾವ್ ಒಂಟಿಯಾಗಿ ಬದುಕು ನಿರ್ವಹಿ, 2020 ಜೂಲೈ 13ರಂದು ಮೃತಪಟ್ಟಿದ್ದರು.
ಅವರು ತನ್ನ ಜೀವಿತಾವಧಿಯಲ್ಲಿ ಮೃತ್ಯು ಪತ್ರವನ್ನು ಬರೆದು ಒಟ್ಟಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ. ಅಶೋಕ್ ರಾವ್ ಮೃತಪಟ್ಟ ಮಾಹಿತಿಯನ್ನು ಆರೋಪಿ ದಿನೇಶ್ ಕೆ ಮತ್ತು ಆತನ ಪತ್ನಿ ಮಂಜುಳಾ ಎಂಬುವರು ಪುನೀತ್ ರಾವ್ ಸಂಬಂಧಿಕರಿಗೆ ವಿಚಾರ ತಿಳಿಸಿದ್ದರು.
ವಿದೇಶದಲ್ಲಿ ಇದ್ದ ಪುನೀತ್ ರಾವ್ ಆತನ ತಾಯಿ ಮತ್ತು ಸಹೋದರ ಅವರು ಕೋವಿಡ್ ಲಾಕ್ ಡೌನ್ ಕಾರಣದಿಂದ ಊರಿಗೆ ಬರಲು ಸಾಧ್ಯವಾಗಿರಲಿಲ್ಲ. ಪುನೀತ್ ರಾವ್ ತಂದೆಯ ಹೆಸರಿನಲ್ಲಿ ರೂ. 4,24,90, 548.90 ಶೇರುಗಳನ್ನು ಮತ್ತು ಅವರ ಹೆಸರಿನಲ್ಲಿದ್ದ ಸ್ಥಿರಾಸ್ತಿ ರೂ.2,20,76,238.81 ಬ್ಯಾಂಕ್ ಡೆಪಾಸಿಟ್ ಗಳನ್ನು ಮೋಸದಿಂದ ಆರೋಪಿಗಳು ತಮ್ಮ ಹೆಸರಿಗೆ ವರ್ಗಾವಣೆ ಮಾಡಿದ್ದಾರೆಂದು ಮೃತ ಅಶೋಕ ರಾವ್ ಅವರ ಮಗ ಪುನೀತ್ ರಾವ್ ದೂರಿನಲ್ಲಿ ವಿವರಿಸಿದ್ದಾರೆ.
ಈ ಬಗೆ ಕಾರ್ಕಳ ನಗರ ಠಾಣೆಯಲ್ಲಿ ಕೇಸು ದಾಖಲಾಗಿ ತನಿಖೆ ನಡೆಯುತ್ತಿದೆ.