ಬಂಟ್ವಾಳ, ಫೆ 25 (DaijiworldNews/HR): ಶಾಂತಿಯುತವಾಗಿ ನಡೆಯುತ್ತಿದ್ದು, ಮಧ್ಯಾಹ್ನದ ವೇಳೆ ಶೇ.50 ರಷ್ಟು ಮತದಾನ ನಡೆಯಿತು ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಸರಿಯಾದ ಸಮಯಕ್ಕೆ ಮತದಾನ ಆರಂಭವಾಗಿದೆಯಾದರೂ ಕರಲವೊಂದು ಬೂತ್ ಗಳಲ್ಲಿ ಮತದಾರರು ಕ್ಯೂನಲ್ಲಿ ತಾಸುಗಳ ಕಾಲ ನಿಂತಿದ್ದ ಚಿತ್ರಣ ಕಂಡು ಬಂದಿದೆ.
ಚುನಾವಣಾ ಇಲಾಖೆಯವರು ಜನಸಂಖ್ಯೆಗಣುಗುಣವಾಗಿ ಬೂತ್ ಗಳನ್ನು ನೀಡದೆ ಇರುವ ಕಾರಣಕ್ಕಾಗಿ ಈ ರೀತಿಯ ಗೊಂದಲಕ್ಕೆ ಕಾರಣವಾಗಿದೆ ಎಂದು ಮತದಾರರು ಆರೋಪ ವ್ಯಕ್ತಪಡಿಸಿದರು.
ಇನ್ನು ಬೆಳಿಗ್ಗೆಯಿಂದಲೇ ಬಿರುಸಿನ ಮತದಾನ ನಡೆದಿದ್ದು, ಸಂಜೆಯ ವೇಳೆ ಬಹುತೇಕ ಗರಿಷ್ಟ ಮಟ್ಟದ ಮತದಾನ ನಡೆಯುವ ನಿರೀಕ್ಷೆ ಇದೆ. ಪ್ರತಿ ಬೂತ್ ಗಳಲ್ಲಿಯೂ ಪೋಲೀಸ್ ಬಿಗಿ ಬಂದೋ ಬಸ್ತ್ ಮಾಡಲಾಗಿದ್ದು, ಯಾವುದೇ ರೀತಿಯ ಸಮಸ್ಯೆ ಗಳಿಗೆ ಅವಕಾಶ ಸಿಗದಂತೆ ಕಟ್ಟೆಚ್ಚರ ಮಾಡಲಾಗಿದೆ. ಇದರ ಜೊತೆಗೆ ವಿವಿಧ ಕಾರಣಗಳಿಂದ ತೆರವಾಗಿದ್ದ ಅನಂತಾಡಿ ಮತ್ತು ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಉಪಚುನಾವಣೆಯೂ ನಡೆಯುತ್ತಿದ್ದು ಇಲ್ಲಿಯೂ ಶಾಂತಿಯುತ ಮತದಾನ ನಡೆಯುತ್ತಿದೆ.