ಉಳ್ಳಾಲ, ಫೆ 25 (DaijiworldNews/MS): ಭಾರೀ ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ರಾಜ್ಯ ವಕ್ಫ್ ಮಂಡಳಿ ನಡೆಸುತ್ತಿರುವ ಉಳ್ಳಾಲ ದರ್ಗಾ ಆಡಳಿತ ಸಮಿತಿ ಚುನಾವಣೆ ಭರದಿಂದ ಸಾಗಿದೆ.
ಒಂಭತ್ತುಕೆರೆಯ ಸರಕಾರಿ ಶಾಲೆಯಲ್ಲಿ ನಡೆಯುತ್ತಿರುವ ಮತದಾನದಲ್ಲಿ ಉಳ್ಳಾಲದ ಹಲವು ಕರಿಯದ ಯುವಕರು ಮತದಾನದಲ್ಲಿ ಉತ್ಸಾಹದಲ್ಲೇ ಭಾಗವಹಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ್ದ,ದರ್ಗಾ ಸಮಿತಿ ಹಾಲಿ ಅಧ್ಯಕ್ಷ ಅಬ್ದುಲ್ ರಶೀದ್ , ವಕ್ಫ್ ಸಂಸ್ಥೆಯೂ ಕಾನೂನು ವಿರೋಧಿಯಾಗಿ ಮತದಾನ ನಡೆಸುತ್ತಿದೆ ಎಂದು ಆರೋಪಿಸಿ, ಸಮಿತಿ ಚುನಾವಣೆಗೆ ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲದೆ ವಕ್ಫ್ ಸಂಸ್ಥೆ ದಬ್ಬಾಳಿಕೆಯಿಂದ ಬೈಲಾವನ್ನು ಹೇರಿಕೆ ಮಾಡಲು ಬಹಳಷ್ಟು ಕಾಲದಿಂದ ಪ್ರಯತ್ನಿಸಿ, ಅದಕ್ಕಾಗಿ 2017ರ ಕಾನೂನು ತಿದ್ದುಪಡಿ ನಡೆಸಿ ಚುನಾವಣೆ ನಡೆಸಲು ಪ್ರಯತ್ನಿಸಿದೆ. ದರ್ಗಾ ಆಡಳಿತ ಸಮಿತಿಗೆ ತಿಳಿಸದೆ ಏಕಾಏಕಿ ವಕ್ಫ್ ಕಚೇರಿಯಿಂದ ಚುನಾವಣೆ ನಡೆಸಲು ಮುಂದಾಗಿದೆ. ಈ ನಡುವೆ ಸಮಿತಿ ವಕ್ಫ್ ಸಂಸ್ಥೆಯವರನ್ನು ಚರ್ಚೆಗೆ ಕರೆದರೂ ಬಾರದೇ ಉಳ್ಳಾಲದ ಜನತೆಗೆ ವಂಚಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿದ್ದರು.
ಅಧ್ಯಕ್ಷ ಅಬ್ದುಲ್ ರಶೀದ್ ಅವರ ವಿರೋಧದ ನಡುವೆಯೂ ಉಳ್ಳಾಲದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ.